


ಬೆಳಾಲು : ಬೆಳಾಲು ಅನಂತೋಡಿ ಪಾನಡ್ಕ- ಪಿಜಾಕ್ಕಳ ದಿಂದ ಕೊಯ್ಯೂರು ಬೆಳ್ತಂಗಡಿಗೆ ಸಂಪರ್ಕವಾಗುವ ರೂ.2.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಸ್ತೆಗೆ ಹಾಗೂ ರೂ.4 ಕೋಟಿ ವೆಚ್ಚದಲ್ಲಿ ಮಾಯ ಮೂಕುಂತಿಮಜಲು ಸೇತುವೆ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ಮಾ.7 ರಂದು ಶಿಲಾನ್ಯಾಸ ನೆರವೇರಿಸಿದರು.


ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ರಸ್ತೆ ಅನುಷ್ಠಾನ ಸಮಿತಿ ಅಧ್ಯಕ್ಷ ಊದಿತ್ ಕುಮಾರ್, ಬೆಳಾಲು ಗುತ್ತು ಜೀವಂಧರ್ ಕುಮಾರ್ ಜೈನ್, ತಿಮ್ಮಪ್ಪ ಗೌಡ ಬೆಳಾಲು, ಬೆಳಾಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಉಪಾಧ್ಯಕ್ಷ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಂದ್ರ ಗೌಡ, ಸದಸ್ಯೆ ವಿದ್ಯಾ ಶ್ರೀನಿವಾಸ ಗೌಡ, ಕ್ರಷ್ಣಯ್ಯ ಆಚಾರ್ಯ, ಯಶೋಧ ಕುತ್ಯಾರಗುಂಡಿ ಅನಂತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ, ಸಹಕಾರ ಸಂಘದ ನಿರ್ದೇಶಕ ಸುಲೈಮಾನ್, ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್, ಸೀತಾರಾಮ್ ಬಿ. ಎಸ್, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಯಶವಂತ ಗೌಡ, ಮಾಧವ ಗೌಡ ಒಣಾಜೆ, ಶ್ರೀಮತಿ ನಿಶಾ ಬನಂದೂರು, ನಾರಾಯಣ ಗೌಡ, ಶಶಿಧರ ಒಡಿಪ್ರೊಟ್ಟು, ಪಿ ಡಿ ಒ ದೀಪಕ್ ರಾಜ್, ಮೊದಲಾದವರು ಊರವರು ಹಾಜರಿದ್ದರು. ರಸ್ತೆಗೆ ಜಾಗ ನೀಡಿದ ಮಹನೀಯರನ್ನು ಗೌರವಿಸಲಾಯಿತು ಹಾಗೂ ಊರವರ ಪರವಾಗಿ ಶಾಸಕ ಹರೀಶ್ ಪೂಂಜರವರನ್ನು ಸಮ್ಮಾನಿಸಲಾಯಿತು.
