


ಇಳಂತಿಲ : ಇಲ್ಲಿಯ ಕಂಗಿನೋಟ್ಟು ನಿವಾಸಿ ಕೆ.ಚೆನ್ನಪ್ಪ ಗೌಡ (81ವರ್ಷ) ಇವರು ಫೆ. 27 ರಂದು ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಸ್ವ ಗ್ರಹದಲ್ಲಿ ನಿಧನರಾದರು.
ಇವರು ಇಳಂತಿಲ ಗ್ರಾಮದ ಅಂಚೆಪಾಲಕರಾಗಿ, ಉಪ್ಪಿನಂಗಡಿ ಮತ್ತು ಪುತ್ತೂರು ಅಂಚೆ ಇಲಾಖೆಯಲ್ಲಿ ಗುಮಾಸ್ತರಾಗಿ 44 ವರ್ಷಗಳ ಕಾಲ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ಮೃತರು ಪತ್ನಿ ಮಾನಕ್ಕ, ಇಬ್ಬರು ಪುತ್ರರು, ಮೂವರು ಪುತ್ರಿಯರಲ್ಲಿ ಓರ್ವ ಪುತ್ರಿ ಇಳಂತಿಲ ಕಡವಿನಬಾಗಿಲು ಅಂಗನವಾಡಿ ಕಾರ್ಯಕರ್ತೆಯಾಗಿ ಹಾಗೂ ಬೆಳ್ತಂಗಡಿ ತಾಲೂಕು ಅಂಗನವಾಡಿ ಕಾರ್ಯಕರ್ತೆ, ಸಹಾಯಕರ ಸ್ವತಂತ್ರ ಸಂಘದ ಅಧ್ಯಕ್ಷರಾಗಿದ್ದಾರೆ. ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು-ಬಳಗದವರವನ್ನು ಅಗಲಿದ್ದಾರೆ.