ಬೆಳ್ತಂಗಡಿ : ಬೀಟ್ ರಾಕರ್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ 12 ನೇ ವರ್ಷದ ಬೆಳ್ತಂಗಡಿ ಸ್ಟಾರ್ ನೈಟ್ ಡ್ಯಾನ್ಸ್ ಮಾ.4 ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಜಿತೇಶ್ ಕುಮಾರ್ ಹೇಳಿದರು.
ಅವರು ಫೆ.28 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಬೀಟ್ ರಾಕರ್ಸ್ ಸಂಸ್ಥೆ ಕಳೆದ 12 ವರ್ಷಗಳಿಂದ ಡ್ಯಾನ್ಸ್ ತರಗತಿ ಮಾಡುತ್ತಿದ್ದು ಸುಮಾರು 80 ಮಕ್ಕಳು ತರಬೇತಿ ಪಡೆಯುತ್ತಿದ್ದು ಸರಕಾರಿ ಶಾಲೆಯ 25 ಮಕ್ಕಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಪ್ರತಿವರ್ಷ ಸ್ಟಾರ್ ನೈಟ್ ಆಯೋಜನೆ ಮಾಡುತ್ತಿದೆ ಈ ವರ್ಷ ಜಿಲ್ಲೆಯ ಹೆಸರಾಂತ ಗಾಯಕರಿಂದ ಸಂಗೀತ ರಸ ಮಂಜರಿ, ಸ್ವರ ಸಂಗಮ, ಕಲಾ ಶ್ರೀ ಕುಡ್ಲ ಬಲೇ ತೆಲಿಪಲೆ ತಂಡದಿಂದ ಕುಸಲ್ದ ಕುರ್ಲರಿ ನಡೆಯಲಿದೆ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷೆ ಪ್ರತಿಮಾ ಗೌಡ, ಕಾರ್ಯದರ್ಶಿ ವಿದ್ಯಾ ಪ್ರಶಾಂತ್, ಜೊತೆ ಕಾರ್ಯದರ್ಶಿ ಪೂರ್ಣಿಮಾ, ಕೋಶಾಧಿಕಾರಿ ರಮೇಶ್ ಉಪಸ್ಥಿತರಿದ್ದರು.