ಬೆಳ್ತಂಗಡಿಯಲ್ಲಿ ಕಾಶಿ ಪ್ಯಾಲೇಸ್ ಪ್ರಾಯೋಜಕತ್ವದಲ್ಲಿ ಯೋಧರಿಗೊಂದು ನಮನ

0

ಬೆಳ್ತಂಗಡಿ: ದೇವರು ಪ್ರತಿಯೊಬ್ಬರಿಗೂ ಒಂದೊಂದು ಅವಕಾಶವನ್ನು ಕೊಡುತ್ತಾನೆ.ಇದನ್ನು ಸದುಪಯೋಗಿಸಿದವರು ಉತ್ತಮ ಬದುಕನ್ನು ರೂಪಿಸುತ್ತಾರೆ. ಕೆಲವರು ಸರಿಯಾದ ಮಾರ್ಗದರ್ಶನ ಇಲ್ಲದೆ ಬಡತನದಲ್ಲಿ ಉಳಿಯುತ್ತಾರೆ ಅಂತವರಿಗೆ ನೆರವು ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯ ಮಾಡಬೇಕು ಆಗ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಉದ್ಯಮಿ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.

ಅವರು ಫೆ.20 ರಂದು ಬೆಳ್ತಂಗಡಿ ಅಯ್ಯಪ್ಪ ಗುಡಿ ಬಳಿ ಶ್ರಿ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಪ್ರಯುಕ್ತ ನವಶಕ್ತಿ ಪ್ರೆಂಡ್ಸ್ ಬೆಳ್ತಂಗಡಿ ಅರ್ಪಿಸುವ ಕಾಶಿ ಪ್ಯಾಲೇಸ್ ಪ್ರಾಯೋಜಕತ್ವದ ಯೋಧರಿಗೊಂದು ನಮನ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಯೋಧರನ್ನು ಗೌರವಿಸಿ ಮಾತನಾಡಿದರು.

ಧಾರ್ಮಿಕ ಚಿಂತಕ ಡಾ. ಪ್ರದೀಪ್ ನಾವೂರ ಮಾತನಾಡಿ ಜಾತ್ರೋತ್ಸವದಲ್ಲಿ ಧರ್ಮ ಕಟ್ಟುವ ಜೊತೆ ಯೋಧರನ್ನು ಗೌರವಿಸಿ ದೇಶ ಕಟ್ಟುವ ಕಾರ್ಯ ಉದ್ಯಮಿ ಶಶಿಧರ ಶೆಟ್ಟಿ ಮಾಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುನಿಲ್ ಶೈಣೈ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅದ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಉದ್ಯಮಿ ಸಂತೋಷ್ ಕುಮಾರ್ ಜೈನ್, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹುತಾತ್ಮ ಯೋಧ ಕೃಷ್ಣಪ್ಪ ಗೌಡ ನಡ ಇವರ ಕುಟುಂಬಿಕರನ್ನು ಗೌರವಿಸಲಾಯಿತು. ಮಾಜಿ ಸೈನಿಕರಾದ ಪರಶುರಾಮ ಗೌಡ ನೇಜಿಕಾರು, ಯೋಗೀಶ್ ನಡ ಇವರನ್ನು ಹಾಗೂ ಇತ್ತೀಚೆಗೆ ಸೈನ್ಯಕ್ಕೆ ಸೇರಿದ ಕುಟುಂಬಿಕರನ್ನು ಗೌರವಿಸಲಾಯಿತು.ಇತ್ತೀಚಿಗೆ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಲಾಯಿತು. ಜಗದೀಶ್ ಜೈನ್ ಸ್ವಾಗತಿಸಿದರು. ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯ ಪ್ರಕಾಶ್ ಅಚಾರ್ಯ ವಂದಿಸಿದರು.ಶಿಕ್ಷಕ ಧರಣೇಂದ್ರ ಜೈನ್ ,ಸ್ಮಿತೇಶ್ ಬಾರ್ಯ ಸಹಕರಿಸಿದರು.ವಿ ಜಿ ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here