ಹಿರಿಯ ಸಾಹಿತಿ ಹಾಗೂ ತಜ್ಞ ಕಲಾವಿದರಾದ ಅಂಬಾತನಯ ಮುದ್ರಾಡಿ ನಿಧನಕ್ಕೆ ಡಾ. ಡಿ. ಹೆಗ್ಗಡೆಯವರಿಂದ ಸಂತಾಪ

0

ಧರ್ಮಸ್ಥಳ: ಹಿರಿಯ ಸಾಹಿತಿ ಹಾಗೂ ತಜ್ಞ ಕಲಾವಿದರಾದ ಅಂಬಾತನಯ ಮುದ್ರಾಡಿ ನಿಧನರಾದ ಸುದ್ದಿ ತಿಳಿದು ವಿಷಾದವಾಯಿತು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಾರ ಅಭಿಮಾನಿಯೂ, ಭಕ್ತರೂ ಆಗಿದ್ದು ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
2018ರ ಜುಲೈ 17 ರಂದು ಧರ್ಮಸ್ಥಳದಲ್ಲಿ ನಡೆದ ಪುರಾಣ ವಾಚನ-ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಉತ್ತಮ ಸಂದೇಶ ನೀಡಿದ್ದರು. ಪ್ರತಿ ವರ್ಷ ಧರ್ಮಸ್ಥಳದಲ್ಲಿ ಆಯೋಜಿಸುವ ಭಜನಾ ತರಬೇತಿ ಕಮ್ಮಟ, ಮದ್ಯವರ್ಜನ ಶಿಬಿರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ನಡೆಯುವ ಕೃಷಿಮೇಳ ಮೊದಲಾದ ಸಮಾರಂಭಗಳಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡಿದ್ದಾರೆ.


ಉತ್ತಮ ವಾಗ್ಮಿಯಾಗಿ, ಸಾಹಿತಿಯಾಗಿ, ಹವ್ಯಾಸಿ ಯಕ್ಷಗಾನ ಹಾಗೂ ಹರಿಕಥಾ ಕಲಾವಿದರಾಗಿ ಸಂಘಟಕರಾಗಿ, ಸಹೃದಯ ಲೇಖಕರಾಗಿ ಅವರು ಚಿರಪರಿಚಿತರು. ಅವರ ಸರಳ ವ್ಯಕ್ತಿತ್ವ, ನೇರ ನಡೆ-ನುಡಿ, ವೈಚಾರಿಕ ಚಿಂತನಾ ಲಹರಿಗಳು ಸ್ತುತ್ಯಾರ್ಹವಾಗಿವೆ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here