


ಧರ್ಮಸ್ಥಳ: ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ್ಟಿದ್ದ ಯುವಕ ನಾಪತ್ತೆ ಯಾಗಿರುವ ಘಟನೆ ನಡೆದಿದೆ.
ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ತಿಮ್ಲಾಪುರ ಗ್ರಾಮದ ಯುವಕ ಲವ (22 ವರ್ಷ) ಕಾಣೆಯಾಗಿದ್ದಾನೆ.
50ಜನರ ಪಾದಯಾತ್ರಿ ತಂಡದ ಜೊತೆ ಧರ್ಮಸ್ಥಳಕ್ಕೆ ಹೊರಟಿದ್ದ ಲವ ಎಂಬ ಯುವಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ನಾಪತ್ತೆಯಾಗಿದ್ದಾರೆ. ಯುವಕನಿಗೆ ಸ್ವಲ್ಪ ಬುದ್ಧಿಮಾಂದ್ಯನಾಗಿದ್ದು ಎನ್ನಲಾಗಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.