ಅಡಿಕೆ ಬೆಳೆಗಾರರ ಕುರಿತು ವಿಧಾನಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಅವರ ಪ್ರಶ್ನೆಗೆ
ವಿಧಾನಪರಿಷತ್ ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರರ ಉತ್ತರ

0

ಬೆಳ್ತಂಗಡಿ: ವಿಧಾನಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಅವರು ಅಡಿಕೆ ಬೆಳೆಗಾರರ ಸಮಸ್ಯೆ ಹಾಗು ಅಡಿಕೆ ಬೆಲೆ ಹೆಚ್ಚಳದ ಬಗ್ಗೆ ವಿಧಾನ ಪರಿಷತ್ ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹಿಂದಿನ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಅಫಿದವಿತ್ ಸಲ್ಲಿಸಿದ್ದರಿಂದ ಅಡಿಕೆ ಬೆಳೆ ಮೇಲೆ ನಿಷೇಧದ ತೂಗುಗತ್ತಿ ಇತ್ತು. ಅದಕ್ಕಾಗಿ ಈ ಕುರಿತು ವೈಜ್ಞಾನಿಕ ಸಂಶೋಧನೆ ನಡೆಸಿ ವರದಿ ಸಲ್ಲಿಸಲು ಅಡಿಕೆ ಕಾರ್ಯಪಡೆಯಿಂದಲೇ ರಾಮಯ್ಯ ಇನ್‌ಸ್ಟಿಟ್ಯೂಟ್‌ಗೆ ಜವಾಬ್ದಾರಿ, ವಹಿಸಲಾಗಿತ್ತು. ಈಗ ವರದಿ ಬಂದಿದೆ ಎಂದರು. ಅಡಿಕೆ ಬೆಳೆ ವಿಸ್ತರಣೆಗೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಈಗಾಗಲೇ ರಾಜ್ಯ ದಲ್ಲಿ 6.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆ ಭವಿಷ್ಯ ಗುಟ್ಕಾ ಕಂಪೆನಿಗಳ ಮೇಲೆ ನಿ೦ತಿದೆ. ದರ ಕುಸಿದರೆ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಾರೆ. ಹಾಗಾಗಿ, ಏಕ ಬೆಳೆ ಪದ್ಧತಿ ಸರಿಯಲ್ಲ ಎಂದು ಮನವರಿಕೆ ಮಾಡಿಕೊಡಬೇಕಿದೆ ಎಂದು ಉತ್ತರಿಸಿದರು.

p>

LEAVE A REPLY

Please enter your comment!
Please enter your name here