ಕರಾಟೆ ಪಟು ಶ್ರೇಯಸ್ ಪೂಜಾರಿರವರು ನೊಬೆಲ್ ವರ್ಲ್ಡ್ ರೆಕಾರ್ಡ್ ಬುಕ್ ಗೆ ಆಯ್ಕೆ

0

ಮಡಂತ್ಯಾರು : ಇತ್ತೀಚೆಗೆ ಮೈಸೂರಲ್ಲಿ ನಡೆದ ನೊಬೆಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಕುಕ್ಕಳ ನಿವಾಸಿ ಕರಾಟೆ ಪಟು ಶ್ರೇಯಸ್ ಪೂಜಾರಿ ರವರು ನೊಬೆಲ್ ವರ್ಲ್ಡ್ ರೆಕಾರ್ಡ್ ಬುಕ್ ಗೆ ಆಯ್ಕೆಯಾಗಿದ್ದಾರೆ.


ಇವರು ಭಾಗವಹಿಸಿದ ಕರಾಟೆಯಲ್ಲಿ 9 ಚಿನ್ನದ ಪದಕ,9 ಬೆಳ್ಳಿಯ ಪದಕ, 8 ಕಂಚಿನ ಪದಕ ವನ್ನು ಗಳಿಸಿಕೊಂಡಿದ್ದಾರೆ. ಅದಲ್ಲದೆ ಶ್ರೇಯಸ್ ರವರ ಸಾಧನೆಗಳನ್ನು ಗುರುತಿಸಿ ಅನೇಕ ಪ್ರತಿಭಾ ಪುರಸ್ಕಾರ ಹಾಗೂ ಸಾಧನ ಪುರಸ್ಕಾರ ಗಳನ್ನು ನೀಡಿದ್ದಾರೆ ಹಾಗೂ ಶಾಸಕ ಹರೀಶ್ ಪೂಂಜ ಹಾಗೂ ಮಾಲಾಡಿ ಪಂಚಾಯತ್ ಸದಸ್ಯ ಪುನೀತ್ ಕುಮಾರ್ ಮಡಂತ್ಯಾರು ಪ್ರೋತ್ಸಾಹಿಸಿದ್ದಾರೆ.
ಇವರಿಗೆ ಕರಾಟೆ ಗುರುಗಳಾದ ಶಿಹಾನ್ ವಸಂತ ಕೆ ಬಂಗೇರ ತರಬೇತಿ ನೀಡಿರುತ್ತಾರೆ.

ಇವರು ಮಡಂತ್ಯಾರು ಗ್ರಾಮದ ಕುಕ್ಕಳ ನಿವಾಸಿ ಶ್ರೀಮತಿ ಶಕುಂತಲಾ ಮತ್ತು ಯೋಗೀಶ್ ಪೂಜಾರಿ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here