ಬೆಳ್ತಂಗಡಿ: ಮೂವರು ಕಲಾ ಸಾಧಕರಿಗೆ ಪ್ರತಿಷ್ಠಿತ ‘ಸುವರ್ಣ ರಂಗ ಸಮ್ಮಾನ್’

0

ಬೆಳ್ತಂಗಡಿ: ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಹಾರಥೋತ್ಸವದ ಶುಭ ಸಂದರ್ಭದಲ್ಲಿ ಸುವರ್ಣ ಸಾಂಸ್ಕೃತಿಕ ವೈಭವದ ಸಂಭ್ರಮವು ಈ ಬಾರಿ ಫೆ.20 ರಂದು ರಾತ್ರಿ 7 ಗಂಟೆಗೆ ಬೆಳ್ತಂಗಡಿ ಸುವರ್ಣ ಆರ್ಕೇಡ್‌ನಲ್ಲಿ ನಡೆಯಲಿದೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ ತಿಳಿಸಿದ್ದಾರೆ.
13ನೇ ವರ್ಷದ ಈ ಸುವರ್ಣ ಸಾಂಸ್ಕೃತಿಕ ವೈಭವ ಸಂಭ್ರಮದಲ್ಲಿ ನಾಡಿನ ಪ್ರತಿಷ್ಠಿತ ಮೂರು ಕಲಾ ಸಾಧಕರನ್ನು ಗುರುತಿಸಿ, ಗೌರವಿಸಲಾಗುವುದು. ಭರತನಾಟ್ಯ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ನೃತ್ಯ ಗುರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಮಲಾಕ್ಷ ಆಚಾರ್, ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅರುವ ಕೊರಗಪ್ಪ ಶೆಟ್ಟಿ, ಸ್ಯಾಕ್ಸೋಫೋನ್ ಮಾಂತ್ರಿಕ, ರಾಜ್ಯದ ಸ್ಯಾಕ್ಸೋಫೀನ್ ವಾದನದಲ್ಲಿ ಏಕೈಕ ಆಕಾಶವಾಣಿ ಎ ಗ್ರೇಡ್ ಕಲಾವಿದ ಪ್ರಕಾಶ್ ದೇವಾಡಿಗರು ಸೇರಿ ಮೂರು ಮಂದಿಗೆ ಸುವರ್ಣ ರಂಗ ಸಮ್ಮಾನ್ 2023 ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಸಂಪತ್ ಸುವರ್ಣ ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೂಲ್ಕಿ ನವವೈಭವ ಕಲಾವಿದೆರ್ ‘ತುಳುನಾಡ ತುಡರ್‌’ ಎಂಬ ತುಳುನಾಡಿನ ಸತ್ಯದ ಕಥೆಯನ್ನು ಪ್ರದರ್ಶಿಸಲಿರುವರು.

LEAVE A REPLY

Please enter your comment!
Please enter your name here