


ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಂದ ವಳಂಬ್ರ ಮನೆತನದ, ಅಮೆರಿಕದಲ್ಲಿ ಕಳೆದ 50 ವರ್ಷಗಳಿಂದ ವೈದ್ಯಕೀಯ ಸೇವೆಯನ್ನು ಮಾಡುತ್ತಿರುವ ಖ್ಯಾತ ಹುದ್ರೋಗತಜ್ಞ ಡಾ. ರಾಮಯ್ಯಗೌಡ ವಳಂಬ್ರ ದಂಪತಿ ಇವರನ್ನು ಸಂಘದ ವತಿಯಿಂದ ಮನೆಗೆ ಭೇಟಿ ನೀಡಿ, ಸನ್ಮಾನಿಸಲಾಯಿತು.

ತಾಲೂಕು ಸಂಘದ ಅಧ್ಯಕ್ಷ ಕುಶಾಲಪ್ಪಗೌಡ ಪುವಾಜೆ, ಉಪಾಧ್ಯಕ್ಷರುಗಳಾದ ನಾರಾಯಣಗೌಡ ದೇವಸ್ಯ ಹಾಗೂ ಕೃಷ್ಣಪ್ಪಗೌಡ ಸವಣಾಲು, ಕಾರ್ಯದರ್ಶಿ ಗಣೇಶ್ ಗೌಡ, ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ ಎಂ, ಸಂಘಟನಾ ಕಾರ್ಯದರ್ಶಿ ಹಾಗೂ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಟಿ, ಕೋಶಾಧಿಕಾರಿ ಬಾಲಕೃಷ್ಣ ಬಿರ್ಮೊಟ್ಟು, ವಾಣಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರುಗಳಾದ ನ್ಯಾಯವಾದಿ ಗೋಪಾಲ್ ಕೃಷ್ಣ ಗುಲ್ಲೋಡಿ ಮತ್ತು ಮಾಧವ ಗೌಡ ಗಣೇಶ್ ಮೆಡಿಕಲ್ ಉಪಸ್ಥಿತರಿದ್ದರು.