ನಿಡ್ಲೆ : ಶ್ರೀ ವನದುರ್ಗಾ ದೇವಿಯ ಆರಾಧನೆ ಹಾಗೂ ದೈವಗಳ ನೇಮೋತ್ಸವ

0

ನಿಡ್ಲೆ : ಶ್ರೀ ವನದುರ್ಗಾ ದೇವಿಯ ಆರಾಧನೆ, ಭಟಾರಿ ಯಾನೆ ಮಲೆದೇವತೆ ಸಹದೈವಗಳು ಕೊಡಂಗೆ ಮತ್ತು ಕಲ್ಕುಡ ಪಿಲಿಚಾಮುಂಡಿ ಸಹದೈವಗಳ ನೇಮೋತ್ಸವವು ಕಲ್ಕುಟಗುಡ್ಡೆಯಲ್ಲಿ ಫೆ.13 ಮತ್ತು 14 ರಂದು ಜರುಗಲಿದೆ.


ಫೆ.13 ರಂದು ಮಧ್ಯಾಹ್ನ ವಣಸಾಯ ಎಂಬಲ್ಲಿ ವನದುರ್ಗಾರಾಧನೆ, ಬ್ರಾಹ್ಮಣ ಸಂತರ್ಪಣೆ ಮತ್ತು ವನಭೋಜನ ಕಾರ್ಯಕ್ರಮ ಜರುಗಿತು. ರಾತ್ರಿ ಪಾಂಡೀಲು ಮನೆಯಿಂದ ಭಂಡಾರ ಹಿಡಿದು ಕೊಡಂಗೆ ಸ್ಥಾನದಲ್ಲಿ ಶ್ರೀ ಭಟಾರಿ ಯಾನೆ ಮಲೆದೇವತೆ ಹಾಗೂ ಸಹ ದೈವಗಳಿಗೆ ವರ್ಷಾವಧಿ ನೇಮೋತ್ಸವ ಜರುಗಿತು.


ಫೆ.14 ರಂದು ಸಂಜೆ ಪಾಂಡೀಲು ಮನೆಯಿಂದ ಭಂಡಾರ ಹಿಡಿದು ಕಲ್ಕುಟ ಗುಡ್ಡೆಯಲ್ಲಿ ಕಲ್ಕುಡ-ವ್ಯಾಘ್ರ ಚಾಮುಂಡಿ ಹಾಗೂ ಸಹದೈವಗಳಿಗೆ ದೊಂಪದಬಲಿ ಉತ್ಸವ ಜರುಗಲಿದೆ.

LEAVE A REPLY

Please enter your comment!
Please enter your name here