ಚಾರ್ಮಾಡಿ: ಇತಿಹಾಸ ಪ್ರಸಿದ್ಧ ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾಮಯ ಧ್ವಜಸ್ತಂಭ ಪ್ರತಿಷ್ಠೆ ಆರಾಟ್ ಉತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಹಿರಿತನದಲ್ಲಿ ಫೆ.12 ರಿಂದ ಪ್ರಾರಂಭಗೊಂಡು ಫೆ. 17ರವರೆಗೆ ನಡೆಯಲಿದೆ.
ಫೆ.13 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬೆಳಿಗ್ಗೆ ಗಣಹೋಮ, ಉಷಃಪೂಜೆ, ಬಿಂಬಶುದ್ಧಿ, ಕಲಶಪೂಜೆ, ಕಲಶಾಭಿಷೇಕ, ಧ್ವಜಪ್ರತಿಷ್ಠೆ, ಧ್ವಜಾಆರೋಹಣ, ಸಾನಿಧ್ಯ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶ್ರೀ ಬಲಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ವಿಧೂಷಿ ಪ್ರಿಯಾ ಸತೀಶ್ ಇವರ ಶಿಷ್ಯವೃಂದದಿಂದ ಭರತನ್ಯಾಟ ನೃತ್ಯ ಕಾರ್ಯಕ್ರಮ ಮತ್ತು ಊರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
p>