ಮಡಂತ್ಯಾರು: ಸೌಹಾರ್ದ ಫ್ರೆಂಡ್ಸ್ ಸಮಿತಿ ಹುಪ್ಪ ಪಾರೆಂಕಿ ಇದರ 5ನೇ ವರ್ಷದ ಮಹಾಸಭೆಯು ಫೆ.10ರಂದು ಆರ್ಶೀವಾದ್ ಸಭಾಂಗಣದಲ್ಲಿ ಅಬ್ದುಲ್ ರಹೀಮಾನ್ ಪಡ್ಪು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ನಿತ್ಯಾನಂದ ಹೆಗ್ಡೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 2023-24ನೇ ಸಾಲಿನ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸದಸ್ಯರ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ನಿತ್ಯಾನಂದ ಬಿ. ಸುಪದ್ಮ ಕೊಲ್ಪೆದಬೈಲು, ಅಧ್ಯಕ್ಷರಾಗಿ ಅಬ್ದುಲ್ ರಹೀಮಾನ್ ಪಡ್ಪು, ಉಪಾಧ್ಯಕ್ಷರಾಗಿ ಪ್ರಭಾಕರ ಶೆಟ್ಟಿ, ಮಂಜುನಾಥ ಶೆಟ್ಟಿ, ಮೆಲ್ವಿನ್, ಅಶ್ರಫ್ ಹುಪ್ಪ, ಸತೀಶ್ ಶೆಟ್ಟಿ ಕುಕ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಮಡಂತ್ಯಾರ್, ಜೊತೆ ಕಾರ್ಯದರ್ಶಿಯಾಗಿ ಹನೀಫ್ ಉನಿಲ, ಹೆನ್ಸನ್ ಉನಿಲ, ನವೀದ್ ಅರ್ತಿಲ, ಸುನಿಲ್ ಮಾರಿಗುಡಿ, ಕೋಶಾಧಿಕಾರಿಯಾಗಿ ಸರ್ವಾನ್, ಸಂಘಟನಾ ಕಾರ್ಯದರ್ಶಿಯಾಗಿ ನವೀದ್ ಪಡ್ಪು, ರಜಾಕ್ ಪರನೀರು, ಗೌರವ ಸಲಹೆಗಾರರಾಗಿ ಎಮ್.ಎನ್ ಮ್ಯಾಥ್ಯೂ, ಪಿ.ಎಮ್.ಇಸ್ಮಾಯಿಲ್, ನಝೀರ್ ಟಿಂಬರ್, ಪುರಂದರ ಶೆಟ್ಟಿ, ಸಿರಿಲ್ ಡಿ.ಕುನ್ಹ, ಉಸ್ಮಾನ್ ಮೇಸ್ತ್ರಿ, ಕಾನೂನು ಸಲಹೆಗಾರರಾಗಿ ಮಹಮ್ಮದ್ ಇರ್ಷಾದ್ ಯುವ ವಕೀಲರು, ಕಾರ್ಯಕಾರಿಣಿ ಸಮಿತಿ ಸದಸ್ಯರು: ರಿಯಾರh, ನದೀಂ, ನೌಶಾದ್, ಶರೀಫ್, ಹನೀಫ್, ಇರ್ಷಿದ್, ಅನ್ವರ್, ಸಲೀಂ, ಸಮೀಜ್, ನಾಸಿರ್, ನಿಜಾಂ, ಇರ್ಷಿದ್ (ಮುನ್ನ), ಶಬೀರ್, ಫಾರೂಕ್ ಮೂಡಯೂರು, ಜಾಬಿರ್, ಜುನೈದ್, , ಕ್ರೀಡಾ ಕಾರ್ಯದರ್ಶಿಯಾಗಿ ಬಶೀರ್ ಪಿಕಪ್, ಮುಸ್ತಾಕ್, ರೋಹಿತ್ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಅಬ್ದುಲ್ ರಹೀಮಾನ್ ಪಡ್ಪು ಮಾತನಾಡುತ್ತಾ ಮುಂಬರುವ ದಿನಗಳ ಸಮಿತಿಯ ಕಾರ್ಯಚರಣೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.ಜನಾಬ್ ಮಹಮ್ಮದ್ ಬಶೀರ್ ಸ್ವಾಗತಿಸಿ, ಬಶೀರ್ ಪಿಕಪ್ ಧನ್ಯವಾದವಿತ್ತರು.
ಮಡಂತ್ಯಾರು ಸೌಹಾರ್ದ ಫ್ರೆಂಡ್ಸ್ ಸಮಿತಿಯ ಪದಾಧಿಕಾರಿಗಳ ಆಯ್ಕೆ
p>