ಕಣಿಯೂರು: ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿನ ಬಹುಜನರ ಹಲವು ವರ್ಷಗಳ ಬೇಡಿಕೆಯಾಗಿದ್ದ ಅಂಬೇಡ್ಕರ್ ಭವನ ರಚನೆಗೆ ಶಾಸಕ ಹರೀಶ್ ಪೂಂಜ ಅವರು 25 ಲಕ್ಷ ರೂ. ಮಂಜೂರುಗೊಳಿಸಿದ್ದು, ಇದರ ಶಂಕುಸ್ಥಾಪನೆಯನ್ನು ಫೆ.10 ರಂದು ಶಾಸಕ ಹರೀಶ್ ಪೂಂಜ ಅವರು ನೆರವೇರಿಸಿದರು.
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಈ ಅನುದಾನ ಮಂಜೂರಾಗಿದೆ. ಶಂಕುಸ್ಥಾಪನೆಯ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಶಾಖೆ ಬೆಳ್ತಂಗಡಿಯ ಪ್ರಧಾನ ಸಂಚಾಲಕ ಕೆ. ನೇಮಿರಾಜ್ ಕಿಲ್ಲೂರು, ತಾಲೂಕು ಖಜಾಂಚಿ ಬಿ.ಕೆ.ಶೇಖರ್ ಕಣಿಯೂರು, ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಗೋಪಾಲಗೌಡ, ಉಪಾಧ್ಯಕ್ಷೆ ಜಲಜಾಕ್ಷಿ, ಪದ್ಮುಂಜ ಪ್ರಾಥಮಿಕ ಕೃಷಿಷತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ಪ್ರಮುಖರಾದ ಶಾರದ ಆರ್ ರೈ, ರಾಜೀವ್ ರೈ ಮುಗೇರೋಡಿ, ಪಂಚಾಯತ್ ಸದಸ್ಯರಾದ ಸೀತರಾಮ ಮಡಿವಾಳ, ಮೋಹಿನಿ, ಯಶೋಧರ ಶೆಟ್ಟಿ ಕಣಿಯೂರು, ಪ್ರವೀಣ್ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಧನಂಜಯ, ನಾರಾಯಣ ಗೌಡ ಮುಚ್ಚೂರು, ಸ್ಥಳೀಯರಾದ ಸಂಜೀವ, ಸುನಂದಾ, ನಳಿನಿ, ಸ್ಧಳೀಯರಾದ ಕು. ಸಂಧ್ಯಾ, ಲೊಕೇಶ್, ಸುಂದರ ಬೇಬಿ, ಸುರೇಶ್, ಶಾಂತಿ, ಗುತ್ತಿಗೆದಾರ ಗುಣಕರ ಕೊಯ್ಯೂರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಅಂಬೇಡ್ಕರ್ ಭವನದ ನಿವೇಶನ ಒದಗಿಸಲು ಸಹಕರಿಸಿದ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಂಚಾಯತ್ ನ ಆಡಳಿತ ಮಂಡಳಿ ‘ ಹಾಗೂ ನಿವೇಶನಕ್ಕಾಗಿ ಹೋರಾಟ ಮಾಡಿದ ಬಿ. ಕೆ.ಶೇಖರ್, ವೆಂಕಣ್ಣ ಕೊಯ್ಯೂರು, ಶೇಖರ್ ಕುಕ್ಕೆಡಿ ಇವರುಗಳನ್ನು ನೆನಪಿಸಲಾಯಿತು. ನಾರಾಯಣ ಮಾಸ್ಟರ್ ಸ್ವಾಗತಿಸಿ, ಕೆ.ನೇಮಿರಾಜ್ ಧನ್ಯವಾದವಿತ್ತರು.
ಕಣಿಯೂರು: ಪದ್ಮುಂಜದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಂಕು ಸ್ಥಾಪನೆ
p>