ಉಪ್ಪಾರು ಪಲ್ಕೆ ಸರಕಾರಿ ಶಾಲೆಗೆ ಬೆಸ್ಟ್ ಫೌಂಡೇಶನ್ ವತಿಯಿಂದ ವಿದ್ಯುತ್ ಕೃಷಿ ಪಂಪುಸೆಟ್ ಕೊಡುಗೆ

0

ಕೊಕ್ಕಡ ಗ್ರಾಮದ ಉಪ್ಪಾರು ಪಲ್ಕೆ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಫೆ.9 ರಂದು ಬೆಸ್ಟ್ ಫೌಂಡೇಶನ್ ವತಿಯಿಂದ 5 HP ಯ ವಿದ್ಯುತ್ ಕೃಷಿ ಪಂಪುಸೆಟ್ ಕೊಡುಗೆಯಾಗಿ ನೀಡಿದರು.

ಶಾಲೆಗೆ ಉತ್ಪತ್ತಿ ತರುವ ಅಡಿಕೆ ತೋಟ ನಿರ್ಮಾಣ ಮಾಡಲು ಶಾಲೆಗೆ ಬೋರ್ವೆಲ್ ವ್ಯವಸ್ಥೆ ಇದ್ದು ಆದರೆ ವಿದ್ಯುತ್ ಪಂಪ್ ಸೆಟ್ಇರಲಿಲ್ಲ. ಈ ಬಗ್ಗೆ ಶಾಲಾ SDMC ಮತ್ತು ಪೋಷಕರು ಬೆಸ್ಟ್ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ರಕ್ಷಿತ್ ಶಿವರಾಂ ರನ್ನು ಸಂಪರ್ಕಿಸಿ ವಿನಂತಿಸಿದಾಗ ತಕ್ಷಣವೇ ಸಂತೋಷದಿಂದಲೇ ಒಪ್ಪಿದ್ದರು ಮತ್ತು ಶಾಲೆಯ ತೋಟವನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

LEAVE A REPLY

Please enter your comment!
Please enter your name here