ಕಾಜೂರು ಮಹಿಳಾ ಶರೀಅತ್ ಕಾಲೇಜು ಪ್ರಥಮ “ರಾಹಿಮಾ” ಪದವಿ ಪ್ರದಾನ

0

ಬೆಳ್ತಂಗಡಿ: ಹಝ್ರತ್ ಹಯಾತುಲ್ ಔಲಿಯಾ ದರ್ಗಾಶರೀಫ್ ಕಾಜೂರು ಮಖಾಂ ಉರೂಸ್ ಮುಬಾರಕ್ ಇದರ ಅಂಗವಾಗಿ ಕಾಜೂರು ಶಿಕ್ಷಣ ಸಂಸ್ಥೆಗಳ ಘಟಕವಾದ ರಹ್ಮಾನಿಯಾ ಮಹಿಳಾ ಶರೀಅತ್ ಕಾಲೇಜು ಇದರ ಪ್ರಥಮ “ರಾಹಿಮಾ” ಪದವಿ ಪ್ರದಾನ ಕಾರ್ಯಕ್ರಮ ಫೆ.8 ರಂದು ನಡೆಯಿತು.
ರಹ್ಮಾನಿಯಾ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯ ಸಯ್ಯಿದ್ ಕಾಜೂರು ತಂಙಳ್ ಅವರು ಪ್ರಥಮ ಪದವಿ ಬಿಡುಗಡೆಗೊಳಿಸಿ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದರು.
ಕಾಜೂರು ಶಿಕ್ಷಣ ಸಂಸ್ಥೆಗಳ ಅಕಾಡಮಿಕ್ ಡೈರೆಕ್ಟರ್ ಕೆ.ಎಮ್ ಸಿದ್ದೀಕ್ ಮೋಟುಗೋಳಿ ಉದ್ಘಾಟಿಸಿದರು.
ಮಹಿಳಾ ಶರೀಅತ್ ಕಾಲೇಜು ಮುದರ್ರಿಸ್ ಆಸಿಫ್ ಮದನಿ ಅಲ್‌- ಹುಮೈದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ ಕೆ, ಕಕ್ಕಿಂಜೆ ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಕಾಯಿಂಜ್ಞಿ‌ ಮತ್ತು ಹನೀಫ್ ತೈವಳಪ್ಪ್ ಕಾಸರಗೋಡು ಭಾಗಿಯಾಗಿದ್ದರು. ‌
ವೇದಿಕೆಯಲ್ಲಿ ಸಯ್ಯಿದ್ ಸಿಮಾಕ್ ಜಮಲುಲ್ಲೈಲಿ ತಂಙಳ್, ಕಾಜೂರು ದ‌ಅವಾ ಕಾಲೇಜು ಮುದರ್ರಿಸ್ ಇರ್ಫಾನ್ ಸಖಾಫಿ ಅಲ್ ಹಿಕಮಿ, ಕಾಜೂರು ಮಾಜಿ ಅಧ್ಯಕ್ಷರುಗಳಾದ ಕೆ ಶೇಖಬ್ಬ, ಬಿ. ಎ ಯೂಸುಫ್ ಶರೀಫ್, ಕೆ.ಎಮ್ ಉಮರ್ ಸಖಾಫಿ ಮತ್ತು ಕೆ‌.ಯು ಮುಹಮ್ಮದ್ ಸಖಾಫಿ, ಕಾಜೂರು ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಕೆ.ಎಮ್ ಕಮಾಲ್, ಕಿಲ್ಲೂರು ಮಸ್ಜಿದ್‌ ಆಡಳಿತಾಧಿಕಾರಿ ಮುಹಮ್ಮದ್ ರಫಿ, ಕಾಜೂರು ಆಡಳಿತ ಮಂಡಳಿ ಉಪಾಧ್ಯಕ್ಷರಾದ ಬದ್ರುದ್ದೀನ್ ಮತ್ತು ಅಬ್ದುಲ್ ರಹಿಮಾನ್, ಕಿಲ್ಲೂರು ಮಸ್ಜಿದ್ ಮಾಜಿ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ಪ್ರಮುಖರಾದ ಜಿ.ಕೆ ಉಮರ್ ಗುರುವಾಯನಕೆರೆ, ಅಬೂಬಕ್ಕರ್ ಮಲ್ಲಿಗೆಮನೆ, ಜೆ.ಹೆಚ್ ಅಬ್ಬಾಸ್, ಕಾಜೂರಿನ ಮುಸ್ಲಿಂ ಜಮಾಅತ್ ಯುನಿಟ್ ಅಧ್ಯಕ್ಷ ಎ.ಯು ಮುಹಮ್ಮದ್ ಅಲಿ,‌ ಎಸ್‌ವೈಎಸ್ ಯುನಿಟ್ ಅಧ್ಯಕ್ಷ ಹೈದರ್ ಆಲಿ ಕೆ.ಎಮ್ ಮತ್ತು ಎಸ್ಸೆಸ್ಸೆಫ್ ಯುನಿಟ್ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಆರ್‌ಡಿಸಿ ದಫ್ಫ್ ಸಮಿತಿ ಅಧ್ಯಕ್ಷ ಹೈಟೆಕ್ ಮುಹಮ್ಮದ್ ಶರೀಫ್, ಕಾಜೂರು ದರ್ಗಾ ಸಮಿತಿಯ ವ್ಯವಸ್ಥಾಪಕ ಶಮೀಮ್‌ ಮುಹಿದ್ದೀನ್, ಎಸ್‌ಎಮ್‌ಎ ಮುರ ರೀಜಿನಲ್ ಅಧ್ಯಕ್ಷ ವಝೀರ್ ಮುಹಮ್ಮದ್ ಬಂಗಾಡಿ ಮೊದಲಾದವರು ಉಪಸ್ಥಿತರಿದ್ದರು.

ದಿಡುಪೆ ಮಸ್ಜಿದ್ ಸದರ್ ಉಸ್ತಾದ್ ಮುಹಮ್ಮದ್ ಶರೀಫ್ ಸಖಾಫಿ ಮತ್ತು ಶರೀಅತ್ ಕಾಲೇಜು ಮುದರ್ರಿಸ್ ಅಬ್ದುರ್ರಹ್ಮಾನ್ ಸ‌ಅದಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ “ಅರ್ರಹ್ಮ” ವಿಶೇಷಾಂಕ ಬಿಡುಗಡೆಗೊಳಿಸಲಾಯಿತು.
ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಸಜ್ಜುಗೊಳಿಸಿದ ವೇದಿಕೆಯಲ್ಲಿ ಕಾಜೂರು ಶರೀಅತ್ ಕಾಲೇಜಿನ ಪ್ರಥಮ ವಿಭಾಗದ 16 ಮಂದಿಗೆ “ರಾಹಿಮಾ” ಧಾರ್ಮಿಕ ಪ್ರಥಮ ಪದವಿ ಪ್ರದಾನ ನಡೆಯಿತು. ‌ಕಾಜೂರು ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ಅವರ ಪ್ರಿಯ ಪತ್ನಿ ಹಾಗೂ ಈಗಿನ ಕಾಜೂರು ತಂಙಳ್ ಅವರ ಪತ್ನಿ ಇಬ್ಬರು ಸಯ್ಯಿದ್ ಬೀಬಿವರ್ಯರುಗಳು ಸೇರಿ ಈ ಪದವಿ ಪ್ರದಾನ ನಡೆಸಿದರು. ಈ ಕಾರ್ಯಕ್ರಮದ ನಿರ್ವಹಣೆಯನ್ನು ಶರೀಅತ್ ಕಾಲೇಜು ಉಪನ್ಯಾಸಕರಾದ ಫಾತಿಮತ್ ತಝ್ಕಿಯಾ ಅಲ್ ಫಾಯಿಲಾ ಮತ್ತು ಮುಬಶ್ಶಿರಾ ಅಲ್ ಪಾಯಿಲ ನಡೆಸಿಕೊಟ್ಟರು.‌ ರಾಹ ಆಂಗ್ಲ ಮಾಧ್ಯಮ ಶಾಲೆಯ ಮಿಸ್ಬಾನಾ ಮತ್ತು ಫಾತಿಮತ್ ಝುಹುರ ಸಹಕರಿಸಿದರು.

LEAVE A REPLY

Please enter your comment!
Please enter your name here