ಮಚ್ಚಿನ: ಸ.ಉ.ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕರ ವರ್ಗಾವಣೆ ಮಾಡದಂತೆ ಶಿಕ್ಷಣ ಇಲಾಖೆಗೆ ಮನವಿ

0

ಮಚ್ಚಿನ: ಸ.ಉ.ಹಿ.ಪ್ರಾ. ಶಾಲೆ ಮಚ್ಚಿನದಲ್ಲಿ ಫೆ.7 ರಂದು ಮುಖ್ಯಶಿಕ್ಷಕರ ವರ್ಗಾವಣೆಯ ವಿರುದ್ಧ ಮಕ್ಕಳ ಹಾಗೂ ಪೋಷಕರ ಪ್ರತಿಭಟನೆ ನಡೆಯಿತು. ಮಚ್ಚಿನ ಶಾಲೆಯಲ್ಲಿ 600 ಮಕ್ಕಳಿಗೆ 16 ಮಂದಿ ಶಿಕ್ಷಕರ ನೇಮಕಾತಿ ಇದೆ ಆದರೆ ಈ ಶಾಲೆಯಲ್ಲಿ 7 ಮಂದಿ ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್ಚುವರಿ ಬಾಕಿ ಶಿಕ್ಷಕರಿಗೆ ಪೋಷಕರೆ ಕೈಯಿಂದ ಹಣ ಸಂಗ್ರಹಿಸಿ ಶಾಲೆ ನಡೆಸುವಂತ ಸ್ಥಿತಿ ಈ ಶಾಲೆಯಲ್ಲಿದೆ. ಈ ಸಮಯದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದ್ದ ಶಾಲೆಯಲ್ಲಿ ಅಭಿವೃದ್ಧಿಯಲ್ಲಿ ಶ್ರಮ ಪಡುತ್ತಿರುವ ಮುಖ್ಯ ಶಿಕ್ಷಕರ ವರ್ಗಾವಣೆಯ ವಿರುದ್ಧ ಈ ಹೋರಟವನ್ನು ಸರಕಾರ ವಿರುದ್ಧ ಹೋರಾಡುವಂತಾಗಿದೆ. ಈ ವರ್ಗಾವಣೆಯನ್ನು ರದ್ದು ಪಡಿಸಬೇಕೆಂದು ಪಂಚಾಯತ್ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ತಿಳಿಸಿದರು.


ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪರಮೇಶ್ವರ್ ಮಾತನಾಡಿ ಈ ಶಾಲೆಯಲ್ಲಿ 8 ವರ್ಷಗಳ ಹಿಂದೆ 120 ಮಕ್ಕಳು ಇರುವ ಸಮಯದಲ್ಲಿ ಈ ಶಾಲೆಗೆ ಆಗಮಿಸಿ ಇದೀಗಾ 8 ವರ್ಷಗಳಿಂದ 645 ಮಕ್ಕಳು ಬರುವಂತೆ ಶ್ರಮ ವಹಿಸಿ ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಕೈ ಜೋಡಿಸಿಕೊಂಡು ಶಾಲಾ ಮಕ್ಕಳ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಸ್ಫರ್ಧಿಸುವಲ್ಲಿ ತನ್ನ ಪರಿಶ್ರಮವನ್ನು ಎಡುವುದರಲ್ಲಿದೆ ಶಾಸಕರ ಹಾಗೂ ಇನ್ನಿತರ ಸಂಸ್ಥೆಗಳಿಂದ ಶಾಲೆಯ ಕೊಠಡಿಗಳಿಗೆ ಅನುದಾನವನ್ನು ಸಂಗ್ರಹಿಸಿ ಶಾಲೆಯ ಬೆಳವಣಿಗೆಯಲ್ಲಿ ಕೈಜೋಡಿಸಿಕೊಂಡಿರುವ ಮುಖ್ಯ ಶಿಕ್ಷಕರ ವರ್ಗವಣೆಯನ್ನು ರದ್ದುಪಡಿಸಿ, ನಿವೃತ್ತಿಗೊಳ್ಳುವವರೆಗೆ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆಸಲ್ಲಿಸಬೇಕು . ವರ್ಗಾವಣೆಗೊಂಡಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದರು.

ಯಾವುದೇ ಕಾರಣಕ್ಕೂ ನಮ್ಮ ಶಾಲೆಯ ಮುಖ್ಯಶಿಕ್ಷಕರನ್ನು ವರ್ಗವಣೆಯನ್ನು ಮಾಡಬಾರದು ಒಂದು ವೇಳೆ ಮಾಡಿದ್ದಲ್ಲಿ ಮಕ್ಕಳ ಸಂಖ್ಯೆ ಕುಸಿತವಾಗಬಹುದು ಖಾಸಗಿ ಶಾಲೆಗಳಿಗೆ ಮಕ್ಕಳು ಮುಖ ಮಾಡದಂತೆ ಬಡ ಹಾಗೂ ಮಾಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಕುತ್ತು ಬರಲಿದ್ದು ಮುಂತಾದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಮ್ಮ ಬೇಡಿಕೆಯನ್ನು ಈಡೇರಿಸಿ ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ತಾವು ಕೈಜೋಡಿಸಬೇಕು ಎಂಬ ಬೇಡಿಕೆಯ ಮನವಿಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪರಮೇಶ್ವರ, ಸದಸ್ಯರು, ಒಟ್ಟು ಸೇರಿ ಸಿಆರ್‌ಪಿ ಚೆತನ ಇವರಿಗೆ ನೀಡಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಸುಮಲತಾ, ಸದಸ್ಯರಾದ ರಫೀಕ್, ಹನೀಫ್, ಅಬೂಬಕ್ಕರ್, ಕವಿತಾ, ಸುಮಯ್ಯ, ಮಾಲತಿ , ಚಿತ್ರಾವತಿ, ಸದಾನಂದ, ಕಿರಣ್ ಕುಮಾರ್, ಶಿವ, ವಿದ್ಯಾ ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here