ಓಶೋಕೈ ವಿದ್ಯಾಸಂಸ್ಥೆ ಹಾಗೂ ಚಾರಿಟೇಬಲ್ ಟ್ರಸ್ಟ್ ನಿಂದ ಮೋಹನ್ ಪೂಜಾರಿ ಬಜ ನೊಬೆಲ್ ವಿಶ್ವ ದಾಖಲೆ

0

ಓಶೋಕೈ ವಿದ್ಯಾಸಂಸ್ಥೆ ಹಾಗೂ ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ಓಶೋಕೈ ಇದರ 39ನೇ ವರ್ಷದ ಸಂಭ್ರಮಾಚರಣೆಯಲ್ಲಿ ನಡೆದಂತಹ ವಿಶ್ವದ ಎರಡನೇ ಅತಿ ದೊಡ್ಡ ದಾಖಲೆಯದಂತಹ ನೊಬೆಲ್ ವಿಶ್ವ ದಾಖಲೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಧಿಕೃತ ಪ್ರಯತ್ನ ಮಾಡಿದಂತಹ ಶೋರಿನ್ ರಿಯೋ ಸಂಸ್ಥೆ ಬೆಳ್ತಂಗಡಿಯ ಮೋಹನ್ ಪೂಜಾರಿ ಬಜ ಇವರು ಒಂದು ನಿಮಿಷದಲ್ಲಿ 293 ಪಂಚ್ ಗಳನ್ನು ಪೂರೈಸುವ ಮೂಲಕ ನೊಬೆಲ್ ವಿಶ್ವ ದಾಖಲೆಯನ್ನು ಮಾಡಿರುತ್ತಾರೆ. ಇವರು ಕರಾಟೆ ತರಬೇತಿಯನ್ನು ಮೂಡುಬಿದ್ರೆಯ ರೆನ್ಸ್ಸಿ ಮಹಮ್ಮದ್ ನದೀಮ್ ಹಾಗೂ ಉಜಿರೆಯ ಶಿಹನ್ ಅಬ್ದುಲ್ ರೆಹಮಾನ್ ಇವರಿಂದ ಪಡೆಯುತ್ತಿದ್ದಾರೆ. ಹಾಗೆ 2ನೇ ಡ್ಯಾನ್ ಬ್ಲಾಕ್ ಬೆಲ್ಟ್ ಪದವಿಯನ್ನು ಹೊಂದಿದ್ದು ಹಲವು ಶಾಲಾ ಕಾಲೇಜಗಳಲ್ಲಿ ಕರಾಟೆ ತರಬೇತಿಯನ್ನು ನೀಡುತ್ತಿದ್ದಾರೆ. ಇವರು ಬಜೆ ಸೇಸಪ್ಪ ಪೂಜಾರಿ ಹಾಗೂ ಶ್ರೀಮತಿ ಬೇಬಿ ಅವರ ಪುತ್ರ.

LEAVE A REPLY

Please enter your comment!
Please enter your name here