ಮಿತ್ತಬಾಗಿಲು : ಅಮೇರಿಕಾ ನಿವಾಸಿ, ಮೂಲತ: ವಳಂಬ್ರ ಮನೆತನದ ಡಾ|ರಾಮಯ್ಯ ಗೌಡ ಮತ್ತು ಇವರ ಧರ್ಮಪತ್ನಿ ಡಾ| ಕಾನಿ ರಾಮಯ್ಯ ಗೌಡ ಇವರು ಫೆ. 01 ರಂದು ಸರಕಾರಿ ಪ್ರೌಢಶಾಲೆ ಮಿತ್ತಬಾಗಿಲು ಇಲ್ಲಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ರಾಮಯ್ಯ ಗೌಡ ಇವರ ಸಹೋದರ ಗೋಪಾಲಕೃಷ್ಣ ಗೌಡ ,ವಳಂಬ್ರ, ಆಲಂಗಾವು ಇವರು ಜೊತೆಗಿದ್ದರು. ಪ್ರಕೃತಿಯ ಸುಂದರ ಪರಿಸರದಲ್ಲಿರುವ ಶಾಲೆಯನ್ನು ನೋಡಿ ಡಾ| ರಾಮಯ್ಯ ಗೌಡ ದಂಪತಿಗಳು ಬಹಳ ಸಂತಸ ವ್ಯಕ್ತಪಡಿಸಿದರು. ತಾನು ಯಾವ ರೀತಿ ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿದ್ದೇನೆ ಎಂಬುದರ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಸಮಾಜದಲ್ಲಿ ಸತ್ಪ್ರಜೆಗಳಾಗಬೇಕು ಎಂದು ಕಿವಿಮಾತು ತಿಳಿಸಿದರು.
ಈ ಸಂದರ್ಭದಲ್ಲಿ ಕಾನಿ ಮೇಡಂ ಇವರು ಮಕ್ಕಳಿಗೆ ಇಟಾಲಿಯನ್ ಭಾಷೆಯ ಹಾಡನ್ನು ಹೇಳಿಕೊಟ್ಟರು ಮತ್ತು ಮಕ್ಕಳೊಂದಿಗೆ ಮಗುವಾಗಿ ಬೆರೆತರು. ನಂತರ ಶಾಲಾ ಅಕ್ಷರ ಕೈತೋಟವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಡಾ|ರಾಮಯ್ಯ ಗೌಡ ದಂಪತಿಗಳ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ಶಾಲಾ ಶಿಕ್ಷಕವೃಂದ, ವಿದ್ಯಾರ್ಥಿಗಳು ,ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರು ಉಪಸ್ಥಿತರಿದ್ದರು. ಡಾ| ರಾಮಯ್ಯ ಗೌಡ ದಂಪತಿಗಳು ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಕುಡಿಯುವ ನೀರಿನ ಘಟಕವನ್ನು ಒದಗಿಸುವುದಾಗಿ ತಿಳಿಸಿದರು.