ತಾಲೂಕಿನ ದೇವಸ್ಥಾನಗಳ ಬ್ರಹ್ಮಕಲಶೋತ್ಸವದಲ್ಲಿ ಹಿಂದೂ ನಾಯಕರ ಕಡೆಗಣನೆ, ಮಹೇಶ್ ಶೆಟ್ಟಿ ತಿಮರೋಡಿ ಆರೋಪ

0

ಬೆಳ್ತಂಗಡಿ :ದೇವಸ್ಥಾನಗಳು ಪ್ರತಿಯೊಬ್ಬ ಹಿಂದೂವಿನ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು ಪ್ರತಿಯೊಬ್ಬ ಹಿಂದೂ ಬಂಧುಗಳಿಗೂ ಮುಕ್ತ ಅವಕಾಶವಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ ಮತ್ತು ಸತ್ಯ. ಅದರೆ ಕಳೆದ ಕೆಲವು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಅನೇಕ ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವದ ಹೆಚ್ಚಿನ ದೇವಸ್ಥಾನಗಳಲ್ಲಿ ತಾಲೂಕಿನ ಜನಪ್ರತಿನಿಧಿಗಳನ್ನು ಗೌರವ ಅಧ್ಯಕ್ಷರನ್ನಾಗಿ ಅಥವಾ ಅಧ್ಯಕ್ಷರಾಗಿ ಆಯ್ಕೆ ಮಾಡುತ್ತೀರುವುದು ಸಾಮಾನ್ಯವಾಗಿದೆ. ತಾಲೂಕಿನ ಹಿಂದೂ ನಾಯಕರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಆರೋಪಿಸಿದರು.

ಅವರು ಫೆ.1 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಬ್ರಹ್ಮಕಲಶೋತ್ಸವದಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಸೂಚಿಸಿದ ಅಥವಾ ಹಿಂದೂ ಧರ್ಮಕ್ಕಾಗಿ ಹಲವಾರು ವರ್ಷಗಳಿಂದ ದುಡಿದ ನಾಯಕರುಗಳ ಹೆಸರನ್ನು ಕಡೆಗಣನೆ ಮಾಡಿ ಕೇವಲ ಜನಪ್ರತಿನಿಧಿಯಾಗಿ ಗೌರವಾಧ್ಯಕ್ಷರಾಗಿ ಅಥವಾ ಅಧ್ಯಕ್ಷರಾಗಿರುವಂತವರು ಸೂಚಿಸಿದ ವ್ಯಕ್ತಿಗೆ ಮಾತ್ರ ಅವಕಾಶ ಕಲ್ಪಿಸುವುದು ಆಯಾ ಗ್ರಾಮಸ್ಥರಿಗೆ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆ ತರುವಂತಹ ವಿಚಾರ ಹಿಂದೂ ಧರ್ಮಕ್ಕಾಗಿ ದುಡಿದ ಯಾವುದೇ ವ್ಯಕ್ತಿಯ ಕಡೆಗಣನೆ ಅಕ್ಷಮ್ಯ ಅಪರಾಧ ಇಂತಹ ಧೋರಣೆಯನ್ನು ಖಂಡಿಸುತ್ತಿದ್ದೇವೆ. ದೇವಸ್ಥಾನಗಳಲ್ಲಿ ರಾಜಕೀಯ ನಡೆಯನ್ನು ಬದಿಗಿಟ್ಟು ಎಲ್ಲಾ ಪಕ್ಷಗಳ ಮುಖಂಡರಿಗೆ ಮುಕ್ತ ಅವಕಾಶ ಕಲ್ಪಿಸಬೇಕು ಮತ್ತು ಮುಜುರಾಯಿ ಇಲಾಖೆಗೆ ಸಂಬಂಧಿಸಿದ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಯ ರಚನೆಯ ಸಂದರ್ಭದಲ್ಲಿ ರಾಜಕೀಯ ಜನಪ್ರತಿನಿಧಿಗಳನ್ನು ವ್ಯವಸ್ಥಾಪನ ಸಮಿತಿಗೆ ಜನಪ್ರತಿನಿಧಿಯಾದರೇ ಅಂತವರು ವ್ಯವಸ್ಥಾಪನ ಸಮಿತಿಗೆ ಮುಖ್ಯಸ್ಥರಾಗುವುದು ಸಾಮಾನ್ಯವಾಗುತ್ತದೆ. ಅತಂಹ ಸಮಯದಲ್ಲಿ ನಾಸ್ತಿಕ ವ್ಯಕ್ತಿಯಿಂದ ದೇವಸ್ಥಾನದ ಅಭಿವೃದ್ಧಿ ಅಥವಾ ಉಳಿವು ಸಾಧ್ಯವೇ..? ಈ ಎಲ್ಲಾ ಕಾರಣಗಳಿಂದ ಆಯಾ ಭಾಗದ ಧಾರ್ಮಿಕ ಮುಖಂಡರನ್ನು ಮತ್ತು ಹಿರಿಯ ವ್ಯಕ್ತಿಗಳನ್ನು ಆಯ್ಕೆ ಮಾಡಿ ದೇವಸ್ಥಾನಗಳಲ್ಲಿ ರಾಜಕೀಯ ನಡೆಸುವುದನ್ನು ಕೊನೆಗೊಳಿಸಬೇಕು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕಲ್ಮಂಜ ಗ್ರಾಮದ ಕಡಂಬು ಸಂತೋಷ, ನಿರಂಜನ್ ಕಡಂಬು, ಪ್ರವೀಣ್, ಪ್ರಜ್ವಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here