ಮಾಯ ಗಾಂಧಿ ನಗರ ಪೂವಕ್ಕರಿಗೆ ಮಾಯಾ ಫ್ರೆಂಡ್ಸ್ ಮುಂದಾಳತ್ವದಲ್ಲಿ ವೈದ್ಯಕೀಯ ನೆರವು

0

ಬೆಳಾಲು : ಮಾಯ ಫ್ರೆಂಡ್ಸ್ ಮಾಯ ಇವರ ಮುಂದಾಳತ್ವದಲ್ಲಿ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬಡ ಕುಟುಂಬದ ಶ್ರೀಮತಿ ಪೂವಕ್ಕ ಬಾಬು ಗೌಡ ಇವರಿಗೆ ರೂ. 25,250 ವೈದ್ಯಕೀಯ ನೆರವನ್ನು ಮಾಯ ಮಹಾದೇವ ದೇವಸ್ಥಾನ ಜಾತ್ರೋತ್ಸವದ ಸಮಾಲೋಚನಾ ಸಭೆಯಲ್ಲಿ ಬಾಬು ಗೌಡರಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್. ಪದ್ಮ ಗೌಡರು ವಿತರಿಸಿದರು.

ಈ ಸಂದರ್ಭದಲ್ಲಿ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ, ಸದಸ್ಯ ದಿನೇಶ್ ಕೋಟ್ಯಾನ್, ಮಾಯಾ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಗೌಡ ಮತ್ತು ಸದಸ್ಯರು, ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್, ಮಾಯಾ ಗುತ್ತು ಪುಷ್ಪದಂತ ಜೈನ್ ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಗೌಡ, ಮತ್ತು ಸದಸ್ಯರು ವ್ಯವತಾಪನಾ ಸಮಿತಿ ಸದಸ್ಯರು ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here