


ಮಚ್ಚಿನ: ಇಲ್ಲಿಯ ವಿದ್ಯಾಸಾಗರ್ ಸಿ.ಬಿ.ಎಸ್.ಸಿ ಸ್ಕೂಲ್ ನಲ್ಲಿ ಮಕ್ಕಳ ಪೋಷಕರ ಕ್ರೀಡಾಕೂಟ ಜ.31 ರಂದು ನಡೆಯಿತು.
ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ತೀರ್ಪುಗಾರರಾಗಿ ಪ್ರೌಢಶಾಲಾ ದೈಹಿಕ ಶಿಕ್ಷಕ ಸುಭಾಷ್ ಚಂದ್ರ ಸಹಕರಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ವೆಂಕಟ್ ರೆಡ್ಡಿ, ಶಿಕ್ಷಕಿ ಸಬಿತಾ, ಪೋಷಕರ ಸಮಿತಿಯ ಅಧ್ಯಕ್ಷರಾದ ಶಶಿಧರ್, ಮುರುಗೋಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಸನ್ನ, ಮಚ್ಚಿನ ಗ್ರಾಮ ಪಂಚಾಯತಿ ಸದಸ್ಯರಾದ ತಾರಾ, ಜಯಶ್ರೀ ಮಡಂತ್ಯಾರು, ಗ್ರಾ.ಪಂ. ಉಪಾಧ್ಯಕ್ಷೆ ಸಂಗೀತ ಶೆಟ್ಟಿ, ಶಾಲಾ ಶಿಕ್ಷಕಿಯರು ಹಾಗೂ ಪೋಷಕರು ಉಪಸ್ಥಿತರಿದ್ದರು.