ಫೆ 3: ಮರೋಡಿ ಉಚ್ಚೂರು ‘ಸುರಭಿ’ ಮನೆಯ ವಠಾರದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

0

ಮರೋಡಿ: ಉಚ್ಚೂರು ‘ಸುರಭಿ’ ಮನೆಯ ವಠಾರದಲ್ಲಿ ಹಾಕಿರುವ ವಿದ್ಯುದ್ದೀಪಾಲಂಕೃತವಾದ ಭವ್ಯ ರಂಗ ಮಂಟಪದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಫೆ 3 ರಂದು ಸಂಜೆ ಗಂಟೆ 5.45 ರಿಂದ ನಡೆಯಲಿದೆ.

ಸಂಜೆ ಗಂಟೆ 4.00ರಿಂದ ಶ್ರೀ ಉಮಾಮಹೇಶ್ವರ ದೇವಸ್ಥಾನ ಮರೋಡಿ ಇಲ್ಲಿಂದ ಶ್ರೀ ದೇವಿಯ ಭಕ್ತಿಪೂರ್ವಕ ಮೆರವಣಿಗೆ ನಡೆಯಲಿದೆ‌. ನಂತರ ಚೌಕಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ನಂತರ ಕಟೀಲು ಕ್ಷೇತ್ರದ ವೇದಮೂರ್ತಿ ಅನಂತ ಪದ್ಮನಾಭ ಅಸ್ರಣ್ಣರವರಿಂದ ಆಶೀರ್ವಚನ‌ ಕಾರ್ಯಕ್ರಮ ಜರುಗಲಿದೆ ಎಂದು ಯಕ್ಷಗಾನ ಸೇವಕರ್ತರಾದ ಉಚ್ಚೂರು ‘ಸುರಭಿ’ ಮನೆಯ ಶ್ರೀಮತಿ ಸುಫಲಾ ಮತ್ತು ಸೇಸಪ್ಪ ಪೂಜಾರಿ,ಶ್ರೀಮತಿ ಯಮುನ ಮತ್ತು ಗೋಪು ಪೂಜಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here