ನಾಳ: ಶ್ರೀ ದುರ್ಗಾಪರಮೇಶ್ವರಿ ದೇವರ ವಿಜೃಂಭಣೆಯ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ಮಹಾರಥೋತ್ಸವ

0

ನಾಳ : ನಾಳ ಶ್ರೀ ದುರ್ಗಾಪರಮೇಶ್ವರಿ ದೇವರ ದರ್ಶನ ಬಲಿ ಜ.27 ರಂದು ವಿಜೃಂಭಣೆಯಿಂದ ನಡೆಯಿತು. ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಾಣ್ಣಾಯರವರ ಮಾರ್ಗದರ್ಶನದಲ್ಲಿ, ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ರಾಘವೇಂದ್ರ ಅಸ್ರಣ್ಣ ನೇತೃತ್ವದಲ್ಲಿ ಧಾರ್ಮಿಕ, ಪೂಜಾ ವಿಧಿ-ವಿಧಾನಗಳೊಂದಿಗೆ ವರ್ಷಾವಧಿ ಜಾತ್ರಾ ಮಹೋತ್ಸವ ಜರುಗಲಿದೆ.

ಜ. 27 ರಂದು ಪೂರ್ವಾ ದೇವರ ಉತ್ಸವ ಬಲಿ ಹೊರಟು, ಮಧ್ಯಾಹ್ನ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ, ದರ್ಶನ ಪ್ರಸಾದ, ಮಹಾಪೂಜೆ. ಹಾಗೂ ಅನ್ನಸಂತರ್ಪಣೆ ಜರುಗಿತು. ಸಂಜೆ ಶ್ರೀ ಕೊಡಮಣಿತ್ತಾಯ ಮತ್ತು ಪಿಲಿಚಾಮುಂಡಿ ದೈವಗಳ ಭಂಡಾರ ಇಳಿಯುವುದು, ರಥಕಲಶ, ರಾತ್ರಿ 9 ಕ್ಕೆ ದೇವರ ಉತ್ಸವ ಬಲಿ-ಹೊರಟು ಉತ್ಸವ, ಕೊಡಮಣಿತ್ತಾಯ ದೈವದ ಗಗ್ಗರ ಸೇವೆ ರಾತ್ರಿ ಮಹಾರಥೋತ್ಸವ, ಶ್ರೀ ಭೂತ ಬಲಿ-ಕವಾಟ ಬಂಧನ. ರಾತ್ರಿ 9 ರಿಂದ ಕಲರ್ಸ್ ಕನ್ನಡ ಖ್ಯಾತಿಯ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿನ್ನೆಲೆ ಗಾಯಕಿ ಕಲಾಸಿಂಧು ಕಲಾವತಿ ದಯಾನಂದ ಉಡುಪಿ ಇವರಿಂದ ಸಂಗೀತ, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಎಡನೀರು ಮಠ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ವಿಶೇಷ ಅಭ್ಯಾಗತರಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರುಗಳಾದ ಕೆ. ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಕಳಿಯ ಗ್ರಾ.ಪಂ. ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯವರು, ಅಭಿವೃದ್ಧಿ ಸಮಿತಿಯವರು, ಭಜನಾ ಮಂಡಳಿಯವರು, ಮಾತೃ ಮಂಡಳಿಯವರು, ವಿವಿಧ ಸಮಿತಿ ಪದಾಧಿಕಾರಿಗಳು ಹಾಗೂ ಊರ-ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here