




ಬಂಗಾಡಿ: ಸಹಸ್ರ ನಾಗಬನ ಶ್ರೀ ನಾಗಬ್ರಹ್ಮಲಿಂಗೇಶ್ವರ ದೇವರ ಪ್ರತಿಷ್ಠಾ ಬ್ರಹ್ಮಕಲಾಶಭೀಷೇಕ ಮಹಾಗಣಪತಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲೋತ್ಸವ ಇದರ ನಾಲ್ಕನೇ ದಿನದ ಧಾರ್ಮಿಕ ಕಾರ್ಯಕ್ರಮಕ್ಕೆ ಉಡುಪಿ ಶ್ರೀ ಪೇಜಾವರ ಅಧೋಕ್ಷಜಾ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದಂಗಳ ರವರು ಆಶೀರ್ವಚನ ನೀಡಿ ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ಯಶೋಧರ ಬಳ್ಳಾಲ್ ಬಂಗಾಡಿ, ಡಾ| ಪ್ರದೀಪ್, ನಂದಕುಮಾರ್ ತಂತ್ರಿಗಳು ಕೊಯ್ಯುರು, ತಿಮ್ಮಪ್ಪ ಗೌಡ ಬೆಳಾಲು, ಮುಕುಂದ ಸುವರ್ಣ, ಅಜಿತ್ ಕುಮಾರ್ ಇಂದ ಬೆಟ್ಟು, ಧನಂಜಯ ಅಜ್ರಿ, ಭಾಸ್ಕರ್ ಧರ್ಮಸ್ಥಳ, ದಿನೇಶ್ ಚಾರ್ಮಾಡಿ, ಡಾ. ಕೃಷ್ಣಾನಂದ, ಡಾ. ವಿಶ್ವ ವಿಜೇತ, ಬೆಳ್ತಂಗಡಿ ಶ್ರೀ ದುರ್ಗಾ ಟ್ರಾವೆಲ್ಸ್ ಮಾಲಕ ವಸಂತ ಬಂಗೇರ ಉಪಸ್ಥಿತರಿದ್ದರು.
ನಂತರ ನಡೆದ ವೈಭವೋಪೂರಿತ ನಾಗಮಂಡಲ ಕಾರ್ಯಕ್ರಮವನ್ನು ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಕಾರ್ಯಕ್ರಮವನ್ನು ವೀಕ್ಷಿಸಿದರು.









