ಗರ್ಡಾಡಿ ಚರ್ಚ್‌ನಲ್ಲಿ ಸಂತ ಸೆಬಾಸ್ಟಿಯನ್ನರ ಹಬ್ಬ ಹಾಗೂ ದೂರವಾಣಿ ಕೈಪಿಡಿ ಬಿಡುಗಡೆ

0

ಗರ್ಡಾಡಿ: ಗರ್ಡಾಡಿ ಚರ್ಚ್‌ನಲ್ಲಿ ಸಂತ ಸೆಬಾಸ್ಟಿಯನ್ನರ ಹಬ್ಬವನ್ನು ಜ.೨೦ ರಂದು ಆಚರಿಸಲಾಯಿತು. ದಿವ್ಯ ಬಲಿಪೂಜೆಯನ್ನು ಪ್ರಧಾನ ಧರ್ಮಗುರುಗಳಾಗಿ ರೆ| ಫಾ| ಡೆನಿಸ್ ಸಲ್ದಾನ್ನಾರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಚರ್ಚಿನ ಎಲ್ಲಾ ಕ್ರೈಸ್ತ ಬಾಂಧವರ ಮಾಹಿತಿಯನ್ನು ಹೊತ್ತ ದೂರವಾಣಿ ಕೈಪಿಡಿಯನ್ನು ಮಹಾ ಪೋಷಕರಾದ ಶ್ರೀಮತಿ ಪಾವ್ಲಿನ್ ಪಿರೇರಾರವರು ಬಿಡುಗಡೆಗೊಳಿಸಿದರು.
ಚರ್ಚಿನ ಧರ್ಮಗುರುಗಳಾದ ವಂ|ಫಾ| ಆಂಥೋನಿ ವಾಸ್ ಉಪಸ್ಥಿತರಿದ್ದು, ವಂ|ಫಾ| ರೋಹನ್ ಲೋಬೊ, ವಂ.ಫಾ| ವಿನೋದ್ ಮಸ್ಕರೇನಸ್, ವಂ|ಫಾ| ಆರ್ಥರ್ ಮಿನೇಜಸ್, ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಹೆರಾಲ್ಡ್ ಮೊನಿಸ್, ಕಾರ್ಯದರ್ಶಿ ಶ್ರೀಮತಿ ಮೇಬಲ್ ಕ್ರಾಸ್ತ, ಟೆಲಿಫೋನ್ ಡೈರೆಕ್ಟರಿಯನ್ನು ಹೊರತೆಗೆಯಲು ಸಹಕರಿಸಿದರು. ಶ್ರೀಮತಿ ಪ್ಲಾವಿಯಾ ಮೊರಾಸ್ ಹಾಗೂ ಜೀವನ್ ಡಿಸೋಜರವರು ಹಾಜರಿದ್ದರು.

LEAVE A REPLY

Please enter your comment!
Please enter your name here