ಉಜಿರೆಯ ಸಂಧ್ಯಾ ಫ್ರೆಶ್ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಕೈಗಾರಿಕಾ ಘಟಕಕ್ಕೆ ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿ

0

ಬೆಳ್ತಂಗಡಿ : ಉಜಿರೆಯ ಸಂಧ್ಯಾ ಫ್ರೆಶ್ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಕೈಗಾರಿಕಾ ಘಟಕಕ್ಕೆ ಪ್ರತಿಷ್ಠಿತ ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿ-2023 ಲಭಿಸಿದೆ.

ಆಂಧ್ರಪ್ರದೇಶದ ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯದಿಂದ ಪ್ರತಿ ವರ್ಷವೂ ಸಾಧಕರನ್ನು ಗುರುತಿಸಿ ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿಯನ್ನು ನೀಡುತ್ತಿದ್ದು ಈ ಬಾರಿ ದಕ್ಷಿಣ ಭಾರತದಿಂದ ಒಟ್ಟು 25 ಮಂದಿಯನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತಿದ್ದಾರೆ. ಈ ಪ್ರಶಸ್ತಿಯಲ್ಲೊಂದು ಗ್ರಾಮೀಣ ಮಹಿಳಾ ಕೈಗಾರಿಕಾ ಉದ್ಯಮಿ ಪ್ರಶಸ್ತಿಯನ್ನು ಬೆಳ್ತಂಗಡಿ ತಾಲೂಕಿನ ಉಜಿರೆಯ ಸಂಧ್ಯಾ ಫ್ರೆಶ್ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಕೈಗಾರಿಕಾ ಘಟಕದ ಉದ್ಯಮಕ್ಕೆ ಲಭಿಸಿದೆ.
ಆಂಧ್ರಪ್ರದೇಶದ ಶ್ರೀ ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯದಲ್ಲಿ ಇಂದು ಜ.25 ರಂದು ಸಂಜೆ 4:30 ಕ್ಕೆ ಮಂತ್ರಾಲಯದ ಗುರುಗಳಿಂದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಉಜಿರೆಯ ಸಂಧ್ಯಾ ಫ್ರೆಶ್ ಘಟಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಚನಾ ರಾಜೇಶ್ ಪೈ ಸ್ವೀಕರಿಸಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here