ನ್ಯಾಯತರ್ಪು : ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವ ಧ್ವಜಾರೋಹಣ ಜ.24 ರಂದು ನೆರವೇರಿತು.
ಜ.24 ರಿಂದ ಜ. 30 ರವರಗೆ ವರ್ಷಾವಧಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ. ಜ.24ರಂದು ಬೆಳಗ್ಗೆ ಹೊರಕಾಣಿಕೆ ಸಮರ್ಪಣೆ, ಧ್ವಜಾರೋಹಣ. ಮಹಾಪೂಜೆ, ನಿತ್ಯ ಬಲಿ, ಪಲ್ಲಪೂಜೆ ನಡೆಯಿತು.
ದೇಗುಲದ ತಂತ್ರಿ ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ ವೇಮೂ.ರಾಘವೇಂದ್ರ ಅಸ್ರಣ್ಣ ನೇತೃತ್ವದಲ್ಲಿ ಧಾರ್ಮಿಕ, ವೈದಿಕ, ಪೂಜಾ ವಿಧಿ-ವಿಧಾನಗಳೊಂದಿಗೆ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಭುವನೇಶ್ ಜೆ, ಸದಸ್ಯರಾದ ವಸಂತ ಮಜಲು , ಜನಾರ್ಧನ ಪೂಜಾರಿ ಗೇರುಕಟ್ಟೆ, ದಿನೇಶ್ ಗೌಡ ಕಲಾಯಿತೊಟ್ಟು, ಶ್ರೀಮತಿ ಅಂಬಾ ಬಿ ಆಳ್ವ, ನಾಳ ಶ್ರೀಮತಿ ವಿಜಯ ಹೆಚ್ ಪ್ರಸಾದ್ ಕುಂಠಿನಿ, ಉಮೇಶ್ ಕೆಲ್ದಡ್ಕ, ರಾಜೇಶ್ ಶೆಟ್ಟಿ ಅಡ್ಡಕೊಡಂಗೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಭಜನಾ ಮಂಡಳಿ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಸಂಬೋಳ್ಯ, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ರೀತಾ ಚಂದ್ರಶೇಖರ್, ದೇವಳ ಕಛೇರಿ ಪ್ರಬಂಧಕರು ಗಿರೀಶ್ ಶೆಟ್ಟಿ ಗೇರುಕಟ್ಟೆ, ಸಿಬ್ಬಂದಿಗಳು ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ನ್ಯಾಯತರ್ಪು, ಕಳಿಯ, ಮಚ್ಚಿನ, ಓಡಿಲ್ನಾಳ ಹಾಗೂ ಊರ-ಪರಊರ ಭಕ್ತಾದಿಗಳು ಭಾಗವಹಿಸಿದ್ದರು.ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.