ವೇಣೂರು: ಅವಿಭಜಿತ ಜಿಲ್ಲಾಮಟ್ಟದ ಜೈನ ಬಾಂಧವರ ಕ್ರೀಡಾಕೂಟವು ಇಲ್ಲಿಯ ಶ್ರೀ ಬಾಹುಬಲಿ ಬೆಟ್ಟ ಹೊರ ಪ್ರಾಂಗಣದಲ್ಲಿ ಜರಗಿತು.
ವೇಣೂರು ಜೈನ್ ಮಿಲನ್ ಅಧ್ಯಕ್ಷ ಸುಕುಮಾರ್ ಜೈನ್ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಜೆ ನಡೆದ ಹೊನಲು ಬೆಳಕಿನ ಹಗ್ಗಜಗ್ಗಾಟ ಮತ್ತು ಶಟ್ಲ್ ಬ್ಯಾಡ್ಮಿಂಟನ್ ಪಂದ್ಯವನ್ನು ಮಂಗಳೂರು ಪ್ರೊ ಕ್ಯಾಟಲಿಸ್ಟ್ ಹಣಕಾಸು ಸಂಸ್ಥೆಗಳ ಮುಖ್ಯಸ್ಥ ಅತುಲ್ ಸುರಾನ ಉದ್ಘಾಟಿಸಿದರು. ವೇಣೂರು ಜೈನದಿಗಂಬರ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ ಅಧ್ಯಕ್ಷತೆ ವಹಿಸಿದ್ದರು. ಗುರುವಾಯನಕೆರೆ ಎಕ್ಸೆಲ್ ಪ.ಪೂ. ಕಾಲೇಜಿನ ಸುಮಂತ್ ಕುಮಾರ್ ಜೈನ್, ರಮ್ಯಾ ವಿಕಾಸ್ ಜೈನ್, ಅಕ್ಷಯ್ ಕುಮಾರ್ ಕತ್ತೋಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ಅಜ್ರಿ ಅವರನ್ನು ಸಮ್ಮಾನಿಸಲಾಯಿತು. ಪ್ರಭಾಚಂದ್ರ ಜೈನ್ ಮೂಡುಕೋಡಿ ಸಮ್ಮಾನಪತ್ರ ವಾಚಿಸಿದರು.
ಕಲ್ಲಬೆಟ್ಟು ಎಕ್ಸ್‌ಲೆಂಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಮೌಲ್ಯ ಪ್ರಾರ್ಥಿಸಿದರು. ವೇಣೂರು ಬಾಹುಬಲಿ ಯುವಜನ ಸಂಘದ ಸಂಘಟನಾ ಕಾರ್ಯದರ್ಶಿ ಬಿ. ಸುಧೀರ್ ಕುಮಾರ್ ಸ್ವಾಗತಿಸಿ, ಬಹುಮಾನಿತ ಪಟ್ಟಿ ವಾಚಿಸಿದರು. ಅಧ್ಯಕ್ಷ ಮಾಣಿಕ್ಯರಾಜ್ ಜೈನ್ ವಂದಿಸಿದರು. ವೇಣೂರು ಜೈನದಿಗಂಬರ ತೀರ್ಥಕ್ಷೇತ್ರ ಸಮಿತಿಯ ಜತೆ ಕಾರ್ಯದರ್ಶಿ, ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿಗುತ್ತು ನಿರೂಪಿಸಿದರು.
ಯುವಜನ ಸಂಘದ ಪ್ರಮೋದ್ ಕುಮಾರ್, ಸಜೇಶ್ ಆರಿಗ, ಪವನ್ ಕುಮಾರ್, ಭರತೇಶ ಇಂದ್ರ, ಭಾರತೀಯ ಜೈನ್ ಮಿಲನ್, ಬ್ರಾಹ್ಮೀ ಮಹಿಳಾ ಸಂಘ, ತೀರ್ಥಕ್ಷೇತ್ರ ಸಮಿತಿ ಸದಸ್ಯರು ಸಹಕರಿಸಿದರು.