ಮರೋಡಿ: ಮಾವಿನಕಟ್ಟೆ ಶಾಲಾ ರಜತ ಮಹೋತ್ಸವ

0

ಮರೋಡಿ:ದ.ಕ.ಜಿ.ಪಂ.ಉ.ಪ್ರಾ. ಶಾಲೆ ಮಾವಿನಕಟ್ಟೆ ಇಲ್ಲಿಯ ರಜತ ಮಹೋತ್ಸವವು ಜ.20 ರಂದು ನಡೆಯಿತು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಮರೋಡಿ ಗ್ರಾ.ಪಂ. ಅಧ್ಯಕ್ಷೆ ಪದ್ಮಶ್ರೀ ಜೈನ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮರೋಡಿ ಗ್ರಾ.ಪಂ ಸದಸ್ಯರಾದ ಯಶೋಧ, ಅಶೋಕ್ ಪೂಜಾರಿ, ಬಿ.ಜೆ.ಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪೆರಾಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ, ಶ್ರೀ.ಕ್ಷೇ.ಧ.ಗ್ರಾ.ಯೋ.ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ರಾಜೇಂದ್ರ ಪಿ.ಪೆರಾಡಿ ಬೀಡು, ಎಂ.ಎನ್.ಕಂಪ್ಯೂ ಸೊಲ್ಯೂಷನ್ ಮೂಡುಬಿದ್ರೆಯ ಶ್ರುತಂಜನ್ ಜೈನ್, ಉದ್ಯಮಿ ಪೃಥ್ವಿರಾಜ್ ಬಂಗೇರ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್, ಬೆಳ್ಳಿಹಬ್ಬ ಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ ಜೆ ಸಾಲ್ಯಾನ್,ಉಪಾಧ್ಯಕ್ಷ ಗಣೇಶ್ ಕರ್ಕೇರ, ಎಸ್.ಡಿ.ಎಂ.ಸಿ ಅಧ್ಯಕ್ಷ ಹರೀಶ್ ಪೂಜಾರಿ,ಉಪಾಧ್ಯಕ್ಷೆ ಕುಶಲಾ, ಮುಖ್ಯೋಪಾಧ್ಯಾಯರಾದ ಉಮೇಶ್ ನಾಯ್ಕ, ಶಾಲಾ ವಿದ್ಯಾರ್ಥಿ ನಾಯಕ ಸುದರ್ಶನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಜಿತ್ ಉಪಸ್ಥಿತರಿದ್ದರು.

ಸನ್ಮಾನ ಕಾರ್ಯಕ್ರಮ: ಹರೀಶ್ ಪೂಂಜ, ಮಾನ್ಯ ಶಾಸಕರು- ಹೇಮರಾಜ್ ಕೆ.ಬೆಳ್ಳಿಬೀಡು, ಗೌರವಾಧ್ಯಕ್ಷರು ಬೆಳ್ಳಿಹಬ್ಬ ಸಮಿತಿ- ಭೂದಾನ, ಭಾಸ್ಕರ ಜೆ.ಸಾಲ್ಯಾನ್, ಕಾರ್ಯಧ್ಯಕ್ಷರು ಬೆಳ್ಳಿಹಬ್ಬ ಸಮಿತಿ-ಪ್ರವೇಶ ದ್ವಾರದ ಕೊಡುಗೆ, ಶ್ಯಾಮಲ ಮತ್ತು ಸೋಮಣ್ಣ ಹೆಗ್ಡೆ- ನೂತನ ಧ್ವಜಕಟ್ಟೆ ಕೊಡುಗೆ, ನಾಬಿರಾಜ್ ದಾಸ್ ಮತ್ತು ಸೌಮ್ಯ ಹೊಸಮನೆ ಪೆರಾಡಿ- ಗ್ರೈಂಡರ್ ಕೊಡುಗೆ, ಶ್ರುತಂಜನ್ ಜೈನ್- ಕಂಪ್ಯೂಟರ್ ಕೊಡುಗೆ, ಕನಕರಾಜ್ ಶೆಟ್ಟಿ- ಗಾಡ್ರೇಜ್ ಕೊಡುಗೆ, ರಾಮಣ್ಣ ಆಚಾರಿ, ಸಾವ್ಯ- ಡಯಾಸ್ ಕೊಡುಗೆ, ಅರುಣ್ ಡಿಸೋಜ ಕಲರ್ ಪ್ರಿಂಟರ್ ಮತ್ತು ಫ್ಯಾನ್ ಕೊಡುಗೆ ಇವರನ್ನು ಗೌರವಿಸಲಾಯಿತು.

ರಾತ್ರಿ ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಹಳೆ ವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ ಚೈತನ್ಯ ಕಲಾವಿದರು ಬೈಲೂರು ಕಲಾವಿದರಿಂದ ವಾರ್ಡ್ ನಂಬರ್-2b ತುಳು ಹಾಸ್ಯಮಯ ನಾಟಕ ಜರಗಿತು.

ಶಾಲಾ ಶಿಕ್ಷಕಿ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿ, ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷ ಹೇಮರಾಜ್ ಕೆ. ಬೆಳ್ಳಿಬೀಡು ಸ್ವಾಗತಿಸಿದರು. ಅಧ್ಯಕ್ಷ ಶುಭರಾಜ್ ಹೆಗ್ಡೆ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here