


ಬೆಳ್ತಂಗಡಿ : ಬೆಳ್ತಂಗಡಿ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ಪುಂಜಾಲಕಟ್ಟೆ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.ಪುಂಜಾಲಕಟ್ಟೆಯ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಠಾಣೆಯ ಪಿಎಸ್ ಐ ಆಗಿ ವರ್ಗಾವಣೆಗೊಂಡಿದ್ದಾರೆ.ಬೆಳ್ತಂಗಡಿಯಲ್ಲಿ 3 ವರ್ಷ ಎರಡು ತಿಂಗಳು ಸೇವೆ ಸಲ್ಲಿಸಿರುವ ನಂದಕುಮಾರ್ ಉಪ್ಪಿನಂಗಡಿ ಠಾಣೆಯಲ್ಲೂ ಸೇವೆ ಸಲ್ಲಿಸಿದ್ರುಮೂಲತಃ ಕೊಡಗಿನವರಾದ ನಂದಕುಮಾರ್ ಚುರುಕಿನ ಹಾಕಿ ಆಟಗಾರನೂ ಹೌದು,ಬೆಳ್ತಂಗಡಿಯಲ್ಲಿ ಅತೀ ಕಠಿಣ ಕೇಸ್ ಗಳನ್ನೂ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ