







ಬೆಳ್ತಂಗಡಿ: ಇಲ್ಲಿಯ ಸಂತೆಕಟ್ಟೆಯ ರಿಕ್ಷಾ ಚಾಲಕ ಮಾಲಕರ ಸಂಘದ ನೂತನ ಸಮಿತಿ ರಚನೆಯು ಜ.19 ರಂದು ನಡೆಯಿತು.
ಗೌರವ ಸಲಹೆಗಾರರಾಗಿ ರಾಜೇಂದ್ರ ಜೈನ್, ಅಧ್ಯಕ್ಷರಾಗಿ ಕಿಶೋರ್, ಕಾರ್ಯದರ್ಶಿ ಸಂತೋಷ್ ಹೆಗ್ಡೆ, ಉಪಾಧ್ಯಕ್ಷರಾಗಿ ಸುರೇಶ, ಜೊತೆ ಕಾರ್ಯದರ್ಶಿಯಾಗಿ ವಿಶ್ವನಾಥ್, ಕೋಶಾಧಿಕಾರಿಯಾಗಿ ಪ್ರಶಾಂತ್ ಇವರುಗಳು ಆಯ್ಕೆಯಾದರು.
ಸಭೆಯಲ್ಲಿ ತಾಲೂಕು ಸಮಿತಿಯ ಉಪಾಧ್ಯಕ್ಷ ಲವ ಕುಮಾರ್ ಪೊಯೈ ಉರುವಾಲು, ಕಾರ್ಯದರ್ಶಿ ರಮೇಶ್ ಕೆ. ಕುದ್ರಡ್ಕ ಇವರು ಸಲಹೆ ಸೂಚನೆ ನೀಡಿ ಲೆಕ್ಕದ ವಿವರಗಳನ್ನು ನೀಡಿದರು.








