ಪೆರಾಡಿ: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಬೀದರು, ಭಾ.ಕೃ.ಅ.ಪ. ಕೃಷಿ ವಿಜ್ಞಾನಿ ಕೇಂದ್ರ ದಕ್ಷಿಣ ಕನ್ನಡ ಮಂಗಳೂರು ಇವರ ಸಹಯೋಗದೊಂದಿಗೆ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಾಖೆ ವಠಾರದಲ್ಲಿ ಮಾಹಿತಿ ಕಾರ್ಯಾಗಾರ ಮತ್ತು ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ ಜ.19 ರಂದು ನಡೆಯಿತು.
ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಉದ್ಘಾಟಿಸಿದರು.
ತೋಟಗಾರಿಕಾ ಬೆಳೆಗಳ ಸುಧಾರಿತ ಬೇಸಾಯ ವಿಧಾನ ಮತ್ತು ಪಶುಸಂಗೋಪನೆ ಬಗ್ಗೆ ಮಾಹಿತಿ ನೀಡಿದರು. ಸುಧಾರಿತ ಅಡಿಕೆ ಬೇಸಾಯ ಕ್ರಮಗಳ ಬಗ್ಗೆ ಡಾ| ರಶ್ಮಿ ಆರ್. ಅಡಿಕೆಯಲ್ಲಿ ಮುಖ್ಯ ರೋಗ ಮತ್ತು ಕೀಟಗಳ ಬಗ್ಗೆ, ಡಾ| ಕೇದಾರನಾಥ್ ಪೋಷಕಂಶಗಳ ನಿರ್ವಾಹಣೆ ಬಗ್ಗೆ, ಡಾ| ಮಲ್ಲಿಕಾರ್ಜುನ್ ಎಲ್. ಪಶುಸಂಗೋಪನೆ ಬಗ್ಗೆ, ಡಾ| ಶಿವಕುಮಾರ್ ಆರ್. ವಿಜ್ಞಾನಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷೆ ಶಿಲ್ಪಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ಲತೀಫ್ , ಸಂಘದ ನಿರ್ದೇಶಕರುಗಳು ಹಾಗೂ ರೈತರುಗಳು, ಹೈನುಗಾರರು ಉಪಸ್ಥಿತರಿದ್ದರು.