ಬೆಳ್ತಂಗಡಿ :ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕಾಡಾನೆ ದಾಳಿಗಳ ಬಗ್ಗೆ ಜನರು ಭಯ ಭೀತರಾಗಿದ್ದು, ಕಾಡಾನೆಗಳು ಜನವಸತಿ ಮತ್ತು ಕೃಷಿ ಭೂಮಿಗಳಲ್ಲಿ ಆಗಾಗ ಪ್ರತ್ಯಕ್ಷವಾಗುತ್ತಿದ್ದು. ಇದು ಸ್ಥಳೀಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬೆಳಗ್ಗಿನ ಜಾವದಲ್ಲಿ ಜನರು ರಬ್ಬರ್ ಟಾಪಿಂಗ್ ಹಾಗೂ ಇತರೆ ಕೆಲಸಗಳಿಗೆ ಹೋಗುವ ಜನರಲ್ಲಿ ಇದು ಭೀತಿ ಹುಟ್ಟಿಸಿದೆ. ಕೆಲವು ದಿನಗಳಿಂದ ಅಣಿಯೂರು, ಕಳೆಂಜ, ಕಾಯರ್ತಡ್ಕ, ಕಾಂಚಾಲ್, ಶಿರಾಡಿ ತೋಟತ್ತಾಡಿ ಈ ಪ್ರದೇಶಗಳಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿರುವ ಬಗ್ಗೆ ಆಗಾಗ ವರದಿಯಾಗುತ್ತಿದ್ದು, ಅರಣ್ಯ ಇಲಾಖೆ ಆದಷ್ಟು ಬೇಗ ಎಚ್ಚೆತ್ತು ಆನೆಗಳನ್ನು ಜನವಸತಿ ಪ್ರದೇಶ ಮತ್ತು ಕೃಷಿ ಭೂಮಿಯಿಂದ ಓಡಿಸುವ ಪ್ರಯತ್ನ ಹಾಗೂ ರೈತರಿಗೆ ಪರಿಹಾರ ವಿತರಿಸುವ ಸಲುವಾಗಿ ಕ್ರಮ ಕೈಗೊಳ್ಳುವಂತೆ ಕೆ ಎಸ್ ಎಂ ಸಿ ಎ ಪದಾಧಿಕಾರಿಗಳ ಸಭೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದೆ.
ಸಭೆಯಲ್ಲಿ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ, ಪ್ರಧಾನ ಕಾರ್ಯದರ್ಶಿ ಸೇಬಾಸ್ಟಿನ್, ಎಂ ಜೆ ಪಿ ಆರ್ ಓ ಸೇಬಾಸ್ಟಿನ್ ಪಿ ಸಿ, ಕೋಶಾಧಿಕಾರಿ ಜಿಮ್ಸನ್ ಗುಂಡ್ಯ, ಧರ್ಮಸ್ಥಳ ವಲಯ ಅಧ್ಯಕ್ಷ ಜೈಸನ್ ಪಟ್ಟೇರಿ, ತೋಟತ್ತಾಡಿ ವಲಯ ಅಧ್ಯಕ್ಷ ಸೇಬಾಸ್ಟಿನ್ ವಿ ಟಿ ಉದನೆ, ವಲಯ ಅಧ್ಯಕ್ಷ ಸೇಬಾಸ್ಟಿನ್ ಎನ್ ಎಂ, ನಿರ್ದೇಶಕರಾದ ವಂ. ಫಾ| ಶಾಜಿ ಮಾತ್ಯು ಮೊದಲಾದವರು ಉಪಸ್ಥಿತರಿದ್ದರು.