ಉಜಿರೆ :ಇಲ್ಲಿಯ ಕಲ್ಲೆ ಅಜಿತ್ ನಗರದ ಶ್ರೀ ನಾಗ ಬ್ರಹ್ಮ, ಶ್ರೀ ವನದುರ್ಗಾ, ಶ್ರೀ ರಕ್ತೇಶ್ವರಿ, ಮಹಿಸಂದಾಯ, ಕಲ್ಲುರ್ಟಿ, ಪಂಜುರ್ಲಿ ಗುಳಿಗ ದೈವಗಳ ಸಾನಿಧ್ಯದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ದೈವಗಳ ನರ್ತನ ಸೇವೆ ನಡೆಯಲಿದೆ ಎಂದು ಉದ್ಯಮಿ ಲಕ್ಷ್ಮಿ ಗ್ರೂಪ್ ನ ಕೆ. ಮೋಹನ್ ಕುಮಾರ್ ಹೇಳಿದರು.
ಅವರು ಜ.18 ರಂದು ಕ್ಷೇತ್ರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಜ.24 ರಂದು ದೈವಜ್ಞ ಸುರತ್ಕಲ್ ನಾಗೇಂದ್ರ ಭಾರಾಧ್ವಜರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. 20 ವರ್ಷಗಳಿಂದ ಇಲ್ಲಿ ಪರಿವಾರ ದೈವಗಳನ್ನು ನಂಬಿಕೊಂಡು ಬರುತ್ತಿದ್ದು ಎರಡು ವರ್ಷದಿಂದ ಪ್ರಶ್ನೆ ಚಿಂತನೆಯಂತೆ ಈ ಭಾಗದ ಭಕ್ತರ ಸಹಕಾರದಿಂದ ಜೀರ್ಣೋದ್ದಾರ ಕಾರ್ಯವಾಗಿದೆ. ಸದ್ರಿ ಕ್ಷೇತ್ರಕ್ಕೆ 20 ಸೆಂಟ್ಸ್ ಜಾಗ ಹೊಂದಿದ್ದು 20 ಸೆಂಟ್ಸ್ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿರುತ್ತಾರೆ. ಬ್ರಹ್ಮಕಲಶೋತ್ಸವ ಕಾರ್ಯಗಳು ಧಾರ್ಮಿಕ ಕಾರ್ಯಕ್ಕೆ ಸೀಮಿತವಾಗಿರುತ್ತದೆ. ಜ.25 ರಂದು ಅಜಿತ್ ನಗರದಿಂದ, ಊರವರಿಂದ ಹೊರೆಕಾಣಿಕೆ ಮೆರವಣಿಗೆ, ಜ.26 ರಂದು ಧಾರ್ಮಿಕ ಸಭೆ, ಜ.27 ರಂದು ದೈವಗಳ ನರ್ತನ ಸೇವೆ ನಡೆಯಲಿದೆ. ಪ್ರತಿದಿನ ಅನ್ನಸಂತರ್ಪಣೆ, ನರ್ತನ ಸೇವೆಯಂದು ಫಲಾಹಾರ ವ್ಯವಸ್ಥೆ ಇದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಕಲ್ಮಂಜ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಎಂ., ಉದ್ಯಮಿ ಅರುಣ್ ಕುಮಾರ್ ಎಂ. ಎಸ್., ಉಜಿರೆ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಪೂವಪ್ಪ ಗೌಡ, ಸ್ಥಳೀಯರಾದ ವೆಂಕಟ್ರಮಣ ಶೆಟ್ಟಿ, ಸುಂದರ ಶೆಟ್ಟಿ ಉಪಸ್ಥಿತರಿದ್ದರು.