ಬೆಳ್ತಂಗಡಿ : ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಚಾಮುಂಡೇಶ್ವರಿ ಎಂಟರ್ಪ್ರೈಸಸ್ ಸಹ ಸಂಸ್ಥೆ ಕಳೆದ 2ವರ್ಷಗಳ ಹಿಂದೆ ಹಳೆಕೋಟೆ ಬಳಿ ಪ್ರಾರಂಭಗೊಂಡು 3ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಚಾಮುಂಡೇಶ್ವರಿ ಇ ಮೋಟಾರ್ಸ್ ನಲ್ಲಿ ಇದೀಗ ನೂತನ ಎಲೆಕ್ಟ್ರಿಕ್ ಬೈಕ್ ಇಕೋ ಡ್ರಿಫ್ಟ್ ಇಂದು ಜ . 17ರಂದು ಮಾರುಕಟ್ಟೆಗೆ ಬಿಡುಗಡೆ ಗೊಂಡಿದೆ.
135ಕೀ.ಮೀ ಮೈಲೇಜ್ ಹೊಂದಿರುವ, 75 ಕಿ.ಮೀ ಸ್ಪೀಡ್ ಹೊಂದಿದೆ. ಬ್ಯಾಟರಿ 3.0, ಮೋಟಾರ್ 3.0 ದೊಂದಿಗೆ 5ವರ್ಷ ವಾರಂಟಿ ಹೊಂದಿರುತ್ತದೆ. ಕೆಂಪು, ಬೂದು ಬಣ್ಣ, ನೀಲಿ, ಮತ್ತು ಕಪ್ಪು ಬಣ್ಣದ 4ಮೊಡೆಲ್ ಗಳಲ್ಲಿ ಲಭ್ಯವಿದೆ.
ಸಾಂಕೇತಿಕ ಬಿಡುಗಡೆ ಸಂದರ್ಭದಲ್ಲಿ ಬೆಳ್ತಂಗಡಿ ಸ್ಟೇಟ್ ಬ್ಯಾಂಕ್ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಪದ್ಮನಾಭ ನಾಯಕ್, ವಿನಾಯಕ ರೈಸ್ ಇಂಡಸ್ಟ್ರಿಸ್ ಮಾಲಕ ಚಂದ್ರಕಾಂತ್ ಕಾಮತ್, ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ನಿವೃತ್ತ ಅಭಿವೃದ್ಧಿ ಅಧಿಕಾರಿ ಶೇಕುಣ್ಯಿ, ವಾಣಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ವಿಷ್ಣುಪ್ರಕಾಶ್, ಬೆಳ್ತಂಗಡಿ ಮಂಜುಶ್ರೀ ಜೇಸಿಐ ಅಧ್ಯಕ್ಷ ಶಂಕರ್ ರಾವ್, ಎಲ್ಐಸಿ ಎಂ.ಡಿ ಆರ್. ಟಿ. ಪ್ರತಿನಿಧಿ ವಿನ್ಸೆಂಟ್ ಟಿ ಡಿಸೋಜಾ, ಲೆಕ್ಕ ಪರಿಶೋಧಕ ಅಜಯ್ ಬಂಜನ್, ಶ್ರೀರಾಮ ಫೈನಾನ್ಸ್ ವ್ಯವಸ್ಥಾಪಕ ಪುಷ್ಪರಾಜ್ ಕೆ. ಕೆ., ಬೆಳ್ತಂಗಡಿ ರಾಯಲ್ ಎನ್ ಫೀಲ್ಡ್ ಶೋರೂಂನ ಕೀರ್ತನ್, ಉಜಿರೆ ಎಸ್ ಡಿ ಎಂ ಕಾಲೇಜಿನ ಬಿವೊಕ್ ವಿದ್ಯಾರ್ಥಿಗಳು, ಶೋರೂಂ ವ್ಯವಸ್ಥಾಪಕ ಜಿನೇಶ್ ಜೈನ್, ಸಿಬಂದಿಗಳು ಉಪಸ್ಥಿತರಿದ್ದರು. ಮಾಲಕ ಸುಧೀರ್ ಹೊಳ್ಳ ಸ್ವಾಗತಿಸಿ, ವಂದಿಸಿದರು. ಬುಕ್ಕಿಂಗ್ ಪ್ರಾರಂಭಗೊಂಡಿದ್ದು 40 ದಿನಗಳಲ್ಲಿ ಎಲೆಕ್ಟ್ರಿಕ್ ಬೈಕ್ ತಮ್ಮ ಕೈ ಸೇರಲಿದೆ.