ನ್ಯಾಶನಲ್ ಬಯೋಫ್ಯುಯೆಲ್ ಎನರ್ಜಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಗೆ ಶಾಸಕ ಹರೀಶ್ ಪೂಂಜ ಭೇಟಿ

0

ಲಾಯಿಲ : ಲಾಯಿಲ ಗಣೇಶ್ ಪ್ರಸಾದ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಪ್ರಾರಂಭಗೊಂಡ ನ್ಯಾಶನಲ್ ಬಯೋಫ್ಯುಯೆಲ್ ಎನರ್ಜಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆಯು ಜ.12 ರಂದು ಜರುಗಿತು.

ಉದ್ಘಾಟನಾ ಸಮಾರಂಭಕ್ಕೆ ಅನ್ಯ ಕಾರ್ಯದ ನಿಮಿತ್ತ ಬರಲು ಅಸಾಧ್ಯವಾಗಿದ್ದ ಶಾಸಕ ಹರೀಶ್ ಪೂಂಜರವರು ಇಂದು (ಜ.13)ಬ್ಯಾಂಕ್ ಗೆ ಆಗಮಿಸಿ ಶುಭ ಹಾರೈಸಿದರು. ಬ್ಯಾಂಕ್ ನ ನಿರ್ದೇಶಕರಾದ ಆನಂದಕೃಷ್ಣ ಗೌಡ, ದಿನೇಶ್ ಗೌಡ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಶಾಸಕರನ್ನು ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಪ.ಪಂ. ಉಪಾಧ್ಯಕ್ಷ ಜಯಾನಂದ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here