ಬೆಳ್ತಂಗಡಿ :ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ ಮಹಿಳಾ ಬಿಲ್ಲವ ವೇದಿಕೆ, ಯುವ ಬಿಲ್ಲವ ವೇದಿಕೆ, ಯುವವಾಹಿನಿ ಬೆಳ್ತಂಗಡಿ ಮತ್ತು ವೇಣೂರು ಘಟಕದ ಸಹಾಭಾಗಿತ್ವದಲ್ಲಿ ಜ.22 ರಂದು ಶ್ರೀ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ಬಿಲ್ಲವ ಜನಪದ ಸಮ್ಮೇಳನ 2023, “ಜೀಟಿಗೆ ” ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 9 ರಿಂದ ತುಳು ಪದರಂಗಿತ ಜನಪದ ಗೀತೆ ವೈವಿದ್ಯ,10 ಕ್ಕೆ ಉದ್ಘಾಟನೆ, ಕೇಂದ್ರ ಸರಕಾರದ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಇವರಿಂದ ಮಾಜಿ ಶಾಸಕ ಕೆ. ವಸಂತ ಬಂಗೇರ, ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಭಾಗವಹಿಸಲಿದ್ದಾರೆ. ಮಂಗಳೂರು ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಡಾ. ಗಣೇಶ್ ಅಮೀನ್ ಸಂಕಮರ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.ಬಳಿಕ ಮೂರ್ತೆದಾರರ ಸಮ್ಮೇಳನ ಗೀತಾ ನಾಟಕ ಮೂರ್ತೆ ಸಾಯನ ತಾಂಕಿನ ಜೋ ಕೇದಗೆ, ಬೆಳಿಗ್ಗೆ 11 ರಿಂದ ವಿಚಾರ ಪ್ರಸ್ತುತಿ ದ. ಕ. ಜಿಲ್ಲಾ ಮೂರ್ತೆದಾರರ ಮಹಾ ಮಂಡಲದ ಮಾಜಿ ಅಧ್ಯಕ್ಷ ಪಿ. ಕೆ. ಸದಾನಂದ ಇವರಿಂದ, ತಾಲೂಕಿನ ಮೂರ್ತೆದಾರ ಉಪಸ್ಥಿತಿಯಲ್ಲಿ. ಮಧ್ಯಾಹ್ನ 12 ರಿಂದ ದೈವಾರಾಧಕರ ಸಮ್ಮೇಳನ, ಗೀತಾ ನಾಟಕ ಮಾಯೋದ ದೇಯಿ ಬೈದೆರ್ಲು, ವಿಚಾರ ಪ್ರಸ್ತುತಿ ಗುರುವಾಯನಕೆರೆ ಎಕ್ಸಲ್ ಪ. ಪೂ. ಕಾಲೇಜು ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ಇವರಿಂದ, ದೈವಸ್ಥಾನ ಮತ್ತು ಗರೋಡಿ ಪಾತ್ರಿಗಳ ಉಪಸ್ಥಿಯಲ್ಲಿ ಮಧ್ಯಾಹ್ನ 2 ರಿಂದ ನಾಟಿ ವೈದ್ಯರ ಸಮ್ಮೇಳನ, ಗೀತಾ ನಾಟಕ ಮರ್ದ್ ದ ಬಿರ್ಸೆದಿ ದೇವಿ ಬೈದೆತಿ, ವಿಚಾರ ಪ್ರಸ್ತುತಿ ಪಡುಬಿದ್ರೆ ಅಂಚನ್ ಆಯುರ್ವೇದಿಕ್ ನ ಡಾ. ಏನ್. ಟಿ. ಅಂಚನ್ ಇವರಿಂದ ಗೌರವ ಉಪಸ್ಥಿತಿ ತಾಲೂಕಿನ ಬಿಲ್ಲವ ನಾಟಿ ವೈದ್ಯರು. ಸಂಜೆ 3.30 ರಿಂದ ಗುತ್ತಿನಾರರ ಸಮ್ಮೇಳನ ಗೀತಾ ನಾಟಕ ಬಿರುವೆರೆ ಗುತ್ತುಡ್ ಅಳಿಯಕಟ್ ವಿಚಾರ ಪ್ರಸ್ತುತಿ ಗುತ್ತು ಬರ್ಕೆ ಅಧ್ಯಯನಕಾರರು ಸುಕೇತ್ ಪೂಜಾರಿ, ಬಿಲ್ಲವ ಗುತ್ತು ಬಾರಿಕೆ, ಮಾಗಂದಡಿಗಳ ಗುತ್ತಿನಾರ ರ ಉಪಸ್ಥಿತಿಯಲ್ಲಿ ಸಂಜೆ 4.30 ರಿಂದ ಶಾಂತಿ ಸಮ್ಮೇಳನ ಗೀತಾ ನಾಟಕ ಯುವವಾಹಿನಿ ಬೆಳ್ತಂಗಡಿ ಘಟಕದಿಂದ ತುಳು ರೂಪಕ ಮೌನ ಗುರು ಕ್ರಾಂತಿ, ವಿಚಾರ ಪ್ರಸ್ತುತಿ ನರಿಕೊಂಬು ಪುರೋಹಿತ ಕೇಶವ ಶಾಂತಿ, ಹೆಜಮಾಡಿ ಪುರೋಹಿತ ಮಹೇಶ್ ಶಾಂತಿ ತಾಲೂಕಿನ ಶಾಂತಿಗಳ ಉಪಸ್ಥಿತಿ,ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ಭಾಗವಹಿಸಲಿದ್ದಾರೆ. ಎಂದು ಜನಪದ ಸಮ್ಮೇಳನದ ಸಂಚಾಲಕ ಸಂಪತ್ ಬಿ. ಸುವರ್ಣ ತಿಳಿಸಿದ್ದಾರೆ
ಜ.22: ಬೆಳ್ತಂಗಡಿಯಲ್ಲಿ ಬಿಲ್ಲವ ಜನಪದ ಸಮ್ಮೇಳನ ಜೀಟಿಗೆ
p>