ನಡ : ನಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡ ಗ್ರಾಮ ಪಂಚಾಯತ್ ನ’ಸ್ವಚ್ಛ ಶನಿವಾರ’- ಕಾರ್ಯಕ್ರಮದ ಅಂಗವಾಗಿ , ಸರ್ಕಾರಿ ಪದವಿಪೂರ್ವ ಕಾಲೇಜು, ನಡ -ಇಲ್ಲಿಯ ರೆಡ್ ಕ್ರಾಸ್ ಘಟಕ ಮತ್ತು ಕಲ್ಪನಾ ಚಾವಳ ರೇಂಜರ್ಸ್ ಘಟಕದ ಸಹಯೋಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛತಾ ಆಂದೋಲನವನ್ನು ನಡ ಮುಖ್ಯ ರಸ್ತೆಯ ಬದಿಗಳಲ್ಲಿ ನಡೆಸಲಾಯಿತು.
ಈ ಬಗ್ಗೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಗೌಡ ವಹಿಸಿಕೊಂಡು, ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಭಾಗವಹಿಸಿದ್ದರು. ಕಾಲೇಜು ವಿದ್ಯಾರ್ಥಿಗಳು ರಸ್ತೆಯ ಬದಿಗಳಲ್ಲಿ ಚೆಲ್ಲಲಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿ, ಅಂಗಡಿಗಳ ಮಾಲೀಕರಿಗೆ ಆಂದೋಲನದ ಮಹತ್ವವನ್ನು ತಿಳಿಸಿದರು. ರೆಡ್ ಕ್ರಾಸ್ ಘಟಕ ಸಂಯೋಜಕ ಮೋಹನ ಗೌಡ, ರೇಂಜರ್ಸ್ ಸಂಯೋಜಕಿ ಶ್ರೀಮತಿ ವಸಂತಿ ಪಿ., ಉಪನ್ಯಾಸಕಿ ಶಿಲ್ಪ ಡಿ.- ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ನಡ ಪ್ರೌಢ ಶಾಲಾ ಎಸ್. ಡಿ. ಎಮ್. ಸಿ. ಉಪಾಧ್ಯಕ್ಷ ಸುಧಾಕರ ಪೂಜಾರಿ , ಗ್ರಾಮಪಂಚಾಯಿತಿ ಸಿಬ್ಬಂದಿಗಳು ಸಹಕರಿಸಿದರು.