ಧರ್ಮಸ್ಥಳ: ಡಾ. ವೀರೇಂದ್ರ ಹೆಗ್ಗಡೆಯವರಿಂದ ‘ಮಗಳು’ ಚಿತ್ರದ ಧ್ವನಿಸುರುಳಿ ಬಿಡುಗಡೆ

0

ಧರ್ಮಸ್ಥಳ: ಕನ್ನಡ ಚಲನಚಿತ್ರ ‘ಮಗಳು’ ಇದರ ಧ್ವನಿಸುರುಳಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಜ.9 ರಂದು ಶ್ರೀಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬಿಷಪ್ ಹೌಸ್‌ನ ಫಾ| ಜೋಸೆಫ್ ವಲಿಯಪರಂಬಿಲ್, ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಾದ ತೋಮಸ್ ಎಂ.ಎಂ., ನಟಿ ಭಾರ್ಗವಿ ಆರ್. ಶೇಟ್, ರಜನಿ ಎ. ಉಜಿರೆ, ಪಿ. ಧರಣೇಂದ್ರ ಕುಮಾರ್, ವಿದ್ಯಾನಂದ ಜೈನ್ ಎರ್ಮೋಡಿ, ಸಂದೇಶ್ ಬಡಕೋಡಿ, ಇಸ್ಮಾಯಿಲ್ ಕೆ. ಪೆರಿಂಜೆ, ಪುಷ್ಪಾ ಉಜಿರೆ, ಚಿತ್ರದ ಛಾಯಾಗ್ರಾಹಕ ಶಶಿಧರ ದೇವಾಡಿಗ, ಪತ್ರಕರ್ತ ಪದ್ಮನಾಭ ವೇಣೂರು, ಜೋಸೆಫ್ ಎಂ.ಎಂ. ಮತ್ತಿತರರು ಉಪಸ್ಥಿತರಿದ್ದರು.

ಚಿತ್ರದ ಪ್ರಮುಖ ಪಾತ್ರದಲ್ಲಿ ಕುಸಲ್ದ ಅರಸೆ ನವೀನ್ ಡಿ ಪಡೀಲ್ ನಟಿಸಿದ್ದಾರೆ. ಉಳಿದಂತೆ ಪಕ್ಕಾ ಹಳ್ಳಿ ಕಲಾವಿದವರು ಎನ್ನುವುದೇ ವಿಶೇಷ. ಚಿತ್ರದ ರಾಮು ಪಾತ್ರದಲ್ಲಿ ನಿರ್ದೇಶಕ ತೋಮಸ್ ಎಂ.ಎಂ., ಮಗಳ ಪಾತ್ರದಲ್ಲಿ ಭಾರ್ಗವಿ ಆರ್. ಶೇಟ್, ತಾಯಿ ಪಾತ್ರದಲ್ಲಿ ಸವಿತಾ ಪ್ಲಾವ್ಯಾ ನಟಿಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಸುಂದರ ಹೆಗ್ಡೆ ಬಿ.ಇ., ಧರಣೇಂದ್ರ ಕುಮಾಲ್, ಶ್ರವಣ ಕುಮಾರಿ, ಅರ್ಪಿತಾ ಕೋಟ್ಯಾನ್, ಶ್ರೀಮಾ ಉಜಿರೆ, ಶರಣ್ ಶೆಟ್ಟಿ ವೇಣೂರು, ಆನಂದ ಗಾಂಧಿನಗರ, ಬಿಜಿಲ್ ಮ್ಯಾಥ್ಯೂ, ತನಿಷಾ ಕಾರ್ಕಳ ಮುಂತಾದವರು ನಟಿಸಿದ್ದಾರೆ.

LEAVE A REPLY

Please enter your comment!
Please enter your name here