ಬೆಳ್ತಂಗಡಿ: ಜಿಲ್ಲೆಯ ಪ್ರಸಿದ್ದ ಚಿನ್ನದ ಮಳಿಗೆಗಳಲ್ಲಿ ಒಂದಾದ ಮುಳಿಯ ಜ್ಯುವೆಲ್ಸ್ ಅನೇಕ ವರ್ಷಗಳಿಂದ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿ ಹಾಗೂ ಪುತ್ತೂರಿನಲ್ಲಿ ಕಿಷ್ನಾ ಡೈಮಂಡ್ಸ್ ಹಾಗೂ ಅಮೂಲ್ಯ ಡೈಮಂಡ್ಸ್ ಸಹಭಾಗಿತ್ವದಲ್ಲಿ “ಯುನಿಕ್ ಡೈಮಂಡ್ ಫೆಸ್ಟ್” ಜನವರಿ 9ರಿಂದ 25ವರೆಗೆ ನಡೆಯಲಿದೆ.
ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಈ ವಜ್ರಾಭರಣ ಹಬ್ಬದ ಉದ್ಘಾಟನೆಯನ್ನು ಮುಳಿಯ ಜ್ಯುವೆಲ್ಸ್ ನ ದಿಗ್ದರ್ಶಕರಾದ ಮುಳಿಯ ಶ್ಯಾಮ್ ಭಟ್ ದೀಪ ಬೆಳಗಿಸುವ ಮೂಲಕ “ಯುನಿಕ್ ಡೈಮಂಡ್ ಫೆಸ್ಟ್” ಚಾಲನೆಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರಾದ ಜಯಶ್ರೀ ಪ್ರಕಾಶ್ ಅಪ್ರಮೇಯ ಹಾಗೂ ವಾಣಿ ಪ.ಪೂ ಕಾಲೇಜಿನ ಉಪನ್ಯಾಸಕರು, ಮಂಜುಶ್ರೀ ಜೆಸಿಐ ಬೆಳ್ತಂಗಡಿಯ ಅಧ್ಯಕ್ಷ ಶಂಕರ್ ಭಟ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
“ಯುನಿಕ್ ಡೈಮಂಡ್ ಫೆಸ್ಟ್” ಪುತ್ತೂರು ಹಾಗೂ ಬೆಳ್ತಂಗಡಿಯ ಮುಳಿಯ ಜ್ಯುವೆಲ್ಸ್ನಲ್ಲಿ ಜನವರಿ 9ರಿಂದ 25ವರೆಗೆ ನಡೆಯಲ್ಲಿದ್ದು ತಾಲೂಕಿನ ಜನತೆಗೆ ಕೈಗೆಟಕುವ ದೂರದಲ್ಲಿ ವಜ್ರಾಭರಣಗಳು ಹೊಸ ವಿನ್ಯಾಸದೊಂದಿಗೆ ಜನರರ ಸೇವೆಗೆ ಸಿದ್ದವಾಗಿದೆ, ವಿಶೇಷವಾಗಿ 4850 ರೂ. ಗಳಿಗೆ ವಜ್ರದ ಆಭರಣಗಳು ದೊರೆಯಲಿದೆ. ಐಜಿಐ ನಿಂದ 100% ಪ್ರಮಾಣೀಕೃತ ವಜ್ರಗಳು ಹಾಗೂ ಡೈಮಂಡ್ ಜ್ಯುವೆಲ್‌ಗಳಲ್ಲಿ ಯಾವಾಗ ಬೇಕಾದರೂ 95% ವಿನಿಮಯ ಮತ್ತು 90% ಬೈಬ್ಯಾಕ್ ಕೊಡುಗೆ ಲಭ್ಯವಿದೆ.
ಈ ಸಂಧರ್ಭದಲ್ಲಿ ಮುಳಿಯ ಜ್ಯುವೆಲ್ಸ್ ನ ಅಡಳಿತ ನಿರ್ದೇಶಕಿ ಅಶ್ವಿನಿ ಕೃಷ್ಣ ನಾರಾಯಣ ಮುಳಿಯ, ಮಾರ್ಕೆಂಟಿಗ್ ಕನ್ಸಲ್ಟೆಂಟ್ ವೇಣೂ ಶರ್ಮ, ಕಿಷ್ನಾ ಡೈಮಂಡ್ಸ್ನ ಸೆಲ್ಸ್ ಮುಖ್ಯಸ್ಥ ಮನಿಷ್, ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆರ್ಯಭಟ ಪ್ರಶಸ್ತಿ ಪುರಸ್ಕೃತ ಉದಯ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.