


ಕುಕ್ಕೇಡಿ: ಕೋಟಿ ಚೆನ್ನಯ ಸೇವಾ ಸಂಘ ಕುಕ್ಕೇಡಿ-ನಿಟ್ಟೆಡೆ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಗುರು ನಮನ , ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವು ಜ.8 ರಂದು ಮಂಜುಶ್ರೀ ಸಮಾಜಮಂದಿರ ಕುಂಡದಬೆಟ್ಟು ಇಲ್ಲಿ ಜರುಗಿತು.

ಧಾರ್ಮಿಕ ಉಪನ್ಯಾಸದಲ್ಲಿ ಎಲ್ಲಾ ಸಮುದಾಯದ ಬಂಧುಗಳಿಗೆ ಉಚಿತವಾಗಿ ವೈದ್ಯಕೀಯ ಸೇವೆ ಹಾಗೂ ಶಿಕ್ಷಣ ನೀಡುವ ವ್ಯವಸ್ಥೆ ಸರ್ಕಾರದಿಂದ ನೀಡಲಿ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡುತ್ತ ಸಮಾಜದಲ್ಲಿ ನಡೆಯತಿದ್ದ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ಒಂದೇ ಜಾತಿ, ಒಂದೇ ಮತ , ಒಂದೇ ದೇವರು ಎಂಬ ಸಂದೇಶವನ್ನು ಸಾರಿದ ವಿಶ್ವ ಗುರು ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಪಾಲಿಸಿಕೊಂಡು ಸಮಾಜಕ್ಕೆ ಅನೇಕ ಸೇವೆಯನ್ನು ಮಾಡುತ್ತಿರುವ ಕೋಟಿ ಚೆನ್ನಯ ಸೇವಾ ಸಂಘದ ಈ ಒಂದು ಕಾರ್ಯಕ್ರಮ ಮಾದರಿ ಎಂದರು.

ಕುಕ್ಕೆಡಿ ನಿಟ್ಟೆಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಕೋರಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರತ್ನಾಕರ ಸಲ್ಯಾನ್ ಅಂಕರ್ಜಾಲು ಮಾತನಾಡಿ ಇವರೆಗೆ ಸಂಘ ನಡೆಸುತ್ತಿರುವ ಸೇವಾ ಚಟುವಟಿಕೆಗಳನ್ನು ವಿವರಿಸಿ ಮುಂದೆಯೂ ನಿಮ್ಮೆಲ್ಲರ ಸಹಕಾರ ಇರಲಿ ಎಂದು ತಿಳಿಸಿದರು.
ವಿವಿಧ ಮನೋರಂಜನೆ ಕಾರ್ಯಕ್ರಮ ಹಾಗೂ ಚುಟುಕು ಆಟೋಟ ಸ್ಪರ್ಧೆ ನಡೆಯಿತು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಪದಾಧಿಕಾರಿಗಳು ಸದಸ್ಯರು ಸಹಕಾರ ನೀಡಿದರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಂಘದ ಗೌರವ ಅಧ್ಯಕ್ಷ ಅಮ್ಮಾಜಿ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕು. ಅನನ್ಯ ಅಮೂಲ್ಯ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ ಲೋಕಯ್ಯ ಪೂಜಾರಿ ಕಂಗಿತ್ತಿಲು ಕಾರ್ಯಕ್ರಮ ನಿರೂಪಿಸಿದರು. ರವಿ ಪೂಜಾರಿ ಉಲ್ತುರು ವಾರ್ಷಿಕ ವರದಿ ವಾಚಿಸಿದರು. ನವೀನ್ ಜಿ. ಬುಳೇಕ್ಕರ ಧನ್ಯವಾದವಿತ್ತರು.