ಬೆಳ್ತಂಗಡಿ :ರೋಟರಿ ಕ್ಲಬ್ ವತಿಯಿಂದ ಸಾರ್ವಜನಿಕರಲ್ಲಿ ದೇಶಭಕ್ತಿ ಬೆಳೆಸುವ ಉದ್ದೇಶದಿಂದ ರೈಟ್ ರೋಟರಿ ಜಾಥಾ ಜ.8 ರಂದು ರೋಟರಿ ವಲಯದ ವತಿಯಿಂದ ಆಯೋಜಿಸಲಾಯಿತು.ಜಾಥಾ ಬೆಳಿಗ್ಗೆ ಸುರತ್ಕಲ್ ನಲ್ಲಿ ಬೈಕಂಪಾಡಿಯಿಂದ ಹೊರಟಿತು. ಜಾಥಾ ರೈಟ್ ರೋಟರಿ ಹೊಸ ಸಮಿತಿ ರಚಿಸಿ ಅಲ್ಲಲ್ಲಿರುವ ಘಟಕಕ್ಕೆ ಭೇಟಿ ನೀಡಿ ನಿವೃತ್ತ ಯೋಧರನ್ನು ಗೌರವವಿಸಿದರು. ಬೈಕಂಪಾಡಿಯಲ್ಲಿ 3 ಮಂದಿ, ಮಂಗಳೂರುನಲ್ಲಿ 3 ಮಂದಿ, ಬಂಟ್ವಾಳದಲ್ಲಿ 5 ಮಂದಿ ಹಾಗೂ ಬೆಳ್ತಂಗಡಿ ಕಾಶಿಬೆಟ್ಟು ರೋಟರಿ ಭವನದಲ್ಲಿ 3 ಮಂದಿ ನಿವೃತ್ತ ಯೋಧರಾದ ನೌಕಾ ಪಡೆಯ ಎ. ಕೆ. ಶಿವನ್ ಉಜಿರೆ, ವಾಯುಸೇನೆ ಶಿವಪ್ರಸಾದ್, ಭೂಸೇನೆಯ ಮೇಘಶ್ಯಾಮ ಇವರನ್ನು ಸನ್ಮಾನಿಸಿದರು.
ಬಳಿಕ ದೇಶದ ರಕ್ಷಣೆಯಲ್ಲಿ ಸೇವೆ ಸಲ್ಲಿಸುವವರಿಗೆ ಗೌರವ ಸಲ್ಲಿಸುವ ಉದ್ದೇಶಕ್ಕಾಗಿ ಜಾಥಾ ಹಮ್ಮಿಕೊಳ್ಳಲಾಗಿದೆ. ರೋಟರಿ ಸದಸ್ಯರು 30 ಬೈಕ್ ಹಾಗೂ 10 ಕಾರು ಸೇರಿ 80 ಮಂದಿ ಭಾಗವಹಿಸಿದ್ದಾರೆ. ಬೆಳ್ತಂಗಡಿಯಿಂದ ಬಳಂಜ, ಮೂಡಬಿದ್ರಿ, ಕಿನ್ನಿಗೋಳಿಗೆ ಹೋಗಿ ಅಲ್ಲಿಲ್ಲಿ ಯೋಧರನ್ನು ಗೌರವಿಸಿ ಬಳಿಕ ಕಡಲ ತೀರಾ ಚಿತ್ರಾಪುರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಜಾಥಾದ ಜಿಲ್ಲಾ ಸಂಚಾಲಕ ಮಂಗಳೂರಿನ ಶ್ರೀಕಾಂತ ಶೆಟ್ಟಿ ಬಾಳ ಹೇಳಿದರು. ಈ ಸಂದರ್ಭದಲ್ಲಿ ಬೈಕಂಪಾಡಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ, ರೋ. ಮೇ. ಜನರಲ್ ಎಂ. ವಿ. ಭಟ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮ ಭಟ್, ಅಸಿಸ್ಟೆಂಟ್ ಗವರ್ನರ್ ರೋ. ಮಂಜುನಾಥ್ ಬಂಟ್ವಾಳ,ರೋ. ಸೂರಜ್ ಹೆಬ್ಬಾರ್, ರೋ. ವಿಕ್ರಮ್ ದತ್ತ, ರೋ. ರಾಧಾಕೃಷ್ಣ ಶೆಟ್ಟಿ, ರೋ.ನಾರಾಯಣ ಎಂ., ಬೆಳ್ತಂಗಡಿಯ ಕ್ಲಬ್ ಸದಸ್ಯರು, ಉಪಸ್ಥಿತರಿದ್ದರು.