ಕಡಿರುದ್ಯಾವರ: ಬಾಲಕಿ ಮೇಲೆ ಅತ್ಯಾಚಾರ: ಇಬ್ಬರ ಬಂಧನ

0

ಕಡಿರುದ್ಯಾವರ ಗ್ರಾಮದ ಕೊಪ್ಪದ ಗುಂಡಿ ಮನೆ ಎಂಬಲ್ಲಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಇಬ್ಬರು ಆರೋಪಿಗಳಾದ ಮನೋಹರ್ ಮತ್ತು ಮಾಧವ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಬಾಲಕಿಯು ತನ್ನ ಹತ್ತಿರದ ಮನೆಯಾದ ಆರೋಪಿ ಸುಧೀರ್ ಎಂಬಾತನ ಮನೆಗೆ ಶಾಲಾ ರಜಾ ದಿನಗಳಲ್ಲಿ ಟಿವಿ ನೋಡಲು ಹೋಗಿದ್ದಾಗ ಬಾಲಕಿಯನ್ನು ಹತ್ತಿರದಲ್ಲೇ ಇರುವ ಆರೋಪಿತನ ಅಜ್ಜಿಯ ಮನೆಗೆ ಕರೆದುಕೊಂಡು‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ಹೋಗಿ ಅತ್ಯಾಚಾರ ಮಾಡಿ ಈ ವಿಚಾರವನ್ನು ಮನೆಯವರಲ್ಲಿ ಹೇಳಿದ್ದಲ್ಲಿ ನಿನ್ನ ಮೇಲೆ ಪೊಲೀಸ್ ಕಂಪ್ಲೇಟ್ ಕೊಡುವುದಾಗಿ ಹೆದರಿಸಿದ್ದು, ಆಕೆಯನ್ನು ಗರ್ಭವತಿಯನ್ನಾಗಿ ಮಾಡಿ ನಂತರ ಬಾಲಕಿಯನ್ನು ಆರೋಪಿಗಳಾದ ಪಾರ್ವತಿ, ಸುಧೀರ್ ಮನೋಹರ, ಮಾಧವ ಸೇರಿ ಮಾರುತಿ ಓಮಿನಿ ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾರೆ.

ಬಾಲಕಿಗೆ ಲೈಂಗಿಕ ದೌರ್ಜನ್ಯ ಆದ ಬಗ್ಗೆ 1098 ನೇ ಚೈಲ್ಡ್ ಲೈನ್ ನಿಂದ 30-12-2022 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ಬಂದು ಇದನ್ನು ಖಚಿತ ಪಡಿಸಲು ಸಿಡಿಪಿಒ ಕಛೇರಿಯ ಅಧಿಕಾರಿಯವರೊಂದಿಗೆ ಠಾಣಾ ಮಹಿಳಾ ಸಿಬ್ಬಂದಿಯವರು ತೆರಳಿ ಮಾಹಿತಿ ಪಡೆಯಲು ಪ್ರಯತ್ನಿಸಿದಾಗ ಮಾಹಿತಿಯನ್ನು ನೀಡದೇ ಇದ್ದುದ್ದರಿಂದ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಮೂಡಬಿದ್ರೆಯ ಪ್ರಜ್ಷಾ ನಿರ್ಗತಿಕ ಮಕ್ಕಳ ಕುಟೀರದಲ್ಲಿ ಆಪ್ತ ಸಮಾಲೋಚಕಿರವರ ಆಪ್ತ ಸಮಲೋಚನೆಯ ಬಳಿಕ ನೀಡಿದ ಮಾಹಿತಿಯಂತೆ ಈ ದಿನ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here