ಕಾಶಿಪಟ್ಣ : ಸ. ಹಿ. ಪ್ರಾ. ಶಾಲೆಗೆ ಟೇಬಲ್ ಹಾಗೂ ಕಪಾಟು ಕೊಡುಗೆ

0

ಕಾಶಿಪಟ್ಣ : ಸ. ಹಿ. ಪ್ರಾ. ಶಾಲೆಗೆ ಎಸ್.ಡಿ.ಎಂ.ಸಿ. ಸದಸ್ಯ ಹಮೀದ್ ಮನವಿ ಮೇರೆಗೆ ಇಫ್ತಿಕಾರ್ ದುಬೈ ಇವರು ರೂ. 25000 ಕ್ಕಿಂತ ಹೆಚ್ಚು ಮೌಲ್ಯದ 5 ಟೇಬಲ್ ಹಾಗೂ ಕರೀಂ ಸಾಹೇಬ್ ಇವರು ರೂ. 11000 ಮೌಲ್ಯದ ಕಪಾಟನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಶಾಲೆಗೆ ಕೊಡುಗೆ ನೀಡಿದ ಇಫ್ತಿಕಾರ್, ಕರೀಂ ಸಾಹೇಬ್ ರವರಿಗೆ ಶಾಲಾ ಮುಖ್ಯ ಶಿಕ್ಷಕ, ಅಧ್ಯಾಪಕ ವೃಂದದ , ಎಸ್. ಡಿ.ಎಂ. ಸಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘ, ವಿದ್ಯಾರ್ಥಿಗಳು, ಪೋಷಕರ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here