ಅಡಿಕೆ ಬೆಳೆಗಾರರ ಸಂಕಷ್ಟದಲ್ಲಿ ಸದಾ ಸ್ಪಂದಿಸುತ್ತಿರುತ್ತದೆ ಸರಕಾರ: ಪ್ರತಾಪ ಸಿಂಹ ನಾಯಕ್

0

ಬೆಳ್ತಂಗಡಿ: ಭಾರತೀಯ ಜನತಾ ಪಕ್ಷದ ಕೇಂದ್ರ ಹಾಗೂ ರಾಜ್ಯ ಸರಕಾರ ಯಾವತ್ತೂ ಕೂಡ ಅಡಿಕೆ ಬೆಳೆಗಾರರೊಂದಿಗೆ ಸ್ಪಂದಿಸುತ್ತಿದೆ ಎಂದು ವಿಧಾನಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.ಅವರು ಜ.4 ರಂದು ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಬಾರಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟದ ಬಗ್ಗೆ ಚರ್ಚೆ ನಡೆದಿತ್ತು. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ಕ್ರಮ ಕೈಗೊಂಡು ವಿವರಣೆ ನೀಡಿದೆ. ಬೆಲೆ ಕುಸಿತದ ಸಂದರ್ಭದಲ್ಲಿಯೂ ಅಡಿಕೆ ಬೆಳೆಗಾರರ ಜೊತೆ ಸೇರಿ ಕಾಲ್ನಡಿಗೆ ಜಾಥಾ ನಡೆಸಿದೆ. ದೇಶದಲ್ಲಿ ಸುಮಾರು12 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಅಡಿಕೆ ಬೆಳೆಸಿ ವಾರ್ಷಿಕ ರೂ.5,400 ಕೋಟಿ ವ್ಯವಹಾರ ನಡೆಸುತ್ತಿದೆ. ರಾಜ್ಯದಲ್ಲಿಯೂ ಸುಮಾರು 9.5 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಅಡಿಕೆ ಬೆಳೆಸಿ ವಾರ್ಷಿಕ ರೂ.4,300 ಕೋಟಿ ವ್ಯವಹಾರ ನಡೆಸಿ ಸುಮಾರು 50 ಲಕ್ಷ ಜನರಿಗೆ ಜೀವನೋಪಾಯ ಒದಗಿಸಿದೆ.ರಾಜ್ಯದಲ್ಲಿ ಕಂಡು ಬಂದ ಎಲೆ ಚುಕ್ಕಿ ರೋಗಕ್ಕೆ ಪರಿಹಾರಕ್ಕಾಗಿ ಮತ್ತು ಸೂಕ್ತ ಕ್ರಮಕ್ಕೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಅರಗ ಜ್ಞಾನೇಂದ್ರರವರು ಕೇಂದ್ರ ಸರಕಾರದ ಕೃಷಿ ಸಚಿವರನ್ನೂ ಭೇಟಿಯಾಗಿ ವಿಜ್ಞಾನಿಗಳ ತನಕ ಭೇಟಿಯಾಗಿ ಮನವಿ ಮಾಡಲಾಗಿದೆ. ಕೇಂದ್ರ ಸರಕಾರದ ಸಚಿವರು ಮತ್ತು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವೈಜ್ಞಾನಿಕವಾಗಿ ಕ್ರಮಕೈಗೊಳ್ಳುವಲ್ಲಿ ಸಹಕರಿಸಿ ಈ ರೋಗ ನಿವಾರಣೆಗೆ ಪ್ರತಿ ಎಕ್ರೆಗೆ ರೂ.4೦೦೦/-ನಂತೆ ಔಷಧಿ ಉಚಿತವಾಗಿ ವಿತರಣೆ ಮಾಡಲಾಗಿದೆ.


ಕರಾವಳಿಯಲ್ಲಿ ಅಡಿಕೆ ಕೃಷಿ ಸಹಜವಾಗಿ ಬೆಳೆಯುತ್ತಿದ್ದರೂ ಇತ್ತೀಚಿನ ವರ್ಷಗಳಿಂದ ಆಂಧ್ರ, ತೆಲಂಗಾಣ ಸೇರಿದಂತೆ ಉತ್ತರಕ್ಕೆ ವ್ಯಾಪಿಸಿದೆ. ಅಡಿಕೆ ಬೆಳೆಯ ಸ್ಥಿರತೆಯ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಕಾಲಕಾಲಕ್ಕೆ ಕ್ರಮಕೈಗೊಳ್ಳುತ್ತಿದೆ. ಅಡಿಕೆಯನ್ನು ಕಬ್ಬು ಬೆಳೆಯಂತೆ ಇತರ ಉಪಯೋಗಗಳಾದ ಬಣ್ಣ, ಔಷಧ, ಮಧ್ಯ ಮೊದಲಾದವುಗಳಲ್ಲಿ ಬಳಸಿಕೊಂಡು ಯಾವುದೇ ಹಾನಿಕಾರವಾಗದಂತೆ ಉಪಯೋಗಿಸಲು ಕ್ರಮ ಕೈಗೊಳ್ಳುತ್ತಿದೆ. ಸರಕಾರ ವಿಶೇಷವಾಗಿ ಅಡಿಕೆ ಬೆಳೆಗಾರರ ಬಗ್ಗೆ ಗಮನ ಹರಿಸಿ ಅಡಿಕೆ ಮರ ಕೂಡ ತೆಂಗಿನ ಮರದಂತೆ ಕಲ್ಪವೃಕ್ಷವಾಗಲು ಶ್ರಮಿಸುತ್ತಿದೆ,
ಆದರೆ ಕಾಂಗ್ರೆಸ್ ಚುನಾವಣೆ ಸಮೀಪಿಸುತ್ತಿರುವ ಕಾರಣ ನಿದ್ದೆಯಿಂದ ಎದ್ದಂತೆ ಯಾವತ್ತೂ ಕೂಡ ಅಡಿಕೆ ಬೆಳೆಗಾರರ ಬಗ್ಗೆ ಚಿಂತನೆ, ಹೋರಾಟ ಮಾಡದೆ ಈಗ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಸುಳ್ಳು ಆರೋಪ ಮಾಡಿ ಬೇಜವಾಬ್ದಾರಿ ತೋರಿಸುತ್ತಿದೆ.ಅಡಿಕೆ ಆಮದಿನ ಬಗ್ಗೆ ಅಂತರಾಷ್ಟ್ರೀಯ ವ್ಯವಸ್ಥೆಯೊಂದಿಗೆ ವಿಶೇಷ ತೆರಿಗೆಯನ್ನು ಏರಿಸುವ ಮೂಲಕ ದೇಶದಲ್ಲಿ ಬೆಲೆ ಸ್ಥಿರವಾಗಿರಲು ಕ್ರಮಕೈಗೊಂಡಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಸಹಕಾರ ಭಾರತಿ ತಾಲೂಕು ಅಧ್ಯಕ್ಷ ರಾಜೇಶ್ ಪೆರ್ಮುಡ, ಬೆಳ್ತಂಗಡಿ ಪ್ರಾ.ಕೃ.ಸ.ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ್ ಸವಣಾಲು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here