ಮಂಗಳೂರು ವಿ.ವಿ ಪುರುಷರ ಫುಟ್ಬಾಲ್ ತಂಡಕ್ಕೆ ಸೇಕ್ರೆಡ್ ಹಾರ್ಟ್ ಕಾಲೇಜಿನ 6 ವಿದ್ಯಾರ್ಥಿಗಳು ಆಯ್ಕೆ

0

ಮಡಂತ್ಯಾರು: ಡಿ.23 ರಿಂದ ಜ.2ರವರೆಗೆಕ್ಯಾಲಿಕೆಟ್ ವಿ.ವಿ ಇದರ ಆಶ್ರಯದಲ್ಲಿ ನಡೆಯಲಿರುವ ಪುರುಷರ ದಕ್ಷಿಣ ವಲಯ ಅಂತರ್ ವಿ.ವಿ ಫುಟ್ಬಾಲ್ ಪಂದ್ಯಾಟಕ್ಕೆ ಮಂಗಳುರು ವಿ.ವಿಯನ್ನು ಪ್ರತಿನಿಧಿಸಲು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನ 6 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.

ವಿನು ಹೆಚ್ ಆರ್(ತೃತೀಯ ಕಲಾ ವಿಭಾಗ), ವೈಷ್ಣವ್ ವಿ(ತೃತೀಯ ಕಲಾ ವಿಭಾಗ) ಹೇಮಂತ್ ಎಸ್(ದ್ವಿತೀಯ ವಾಣಿಜ್ಯ ಶಾಸ್ತ್ರ) ಹಾಗೂ ಅನ್ಸಾರ್ ಎಮ್ ಹೆಚ್ (ಪ್ರಥಮ ಕಲಾ ವಿಭಾಗ) ವಿ.ವಿ ತಂಡಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು.

ಈ ಪಂದ್ಯಾಕೂಟದ ಮೊದಲ ಸುತ್ತಿನಲ್ಲಿ ಮಂಗಳೂರು ವಿ.ವಿ ಯು ತಮಿಳುನಾಡಿನ ಅಲಗಪ್ಪ ವಿ.ವಿ ಯನ್ನು 4-1 ಗೋಲ್ ಗಳ ಅಂತರದಿಂದ ಸೋಲಿಸಿತು. ದ್ವಿತೀಯ ಸುತ್ತಿನಲ್ಲಿ ಮಂಗಳೂರು ವಿ.ವಿಯು ತಮಿಳುನಾಡಿನ ಸತ್ಯಬಾಮ ಇನ್ಸ್ ಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ತಂಡವನ್ನು ಎದುರಿಸಿದೆ. ತಂಡಕ್ಕೆ ಇಬ್ರಾಹಿಂ ಎಂ ತರಬೇತುದಾರರಾಗಿ ಹಾಗೂ ಸಿರಾಜುದ್ದೀನ್ ರವರು ತಂಡ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here