ಬೆಳ್ತಂಗಡಿ : ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘಕ್ಕೆ ಡಿ.28ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೆನ್ರಿ ಲೋಬೊ ಬೆಳ್ತಂಗಡಿ, ಉಪಾಧ್ಯಕ್ಷರಾಗಿ ಡೇನಿಸ್ ಸಿಕ್ವೇರಾ ವೇಣೂರು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಜೇಮ್ಸ್ ಡಿಸೋಜ ಬೆಳ್ತಂಗಡಿ, ಹೆರಾಲ್ಡ್ ಪಿಂಟೊ ಉಜಿರೆ, ಜೋಸೆಫ್ ಪೀಟರ್ ಸಲ್ಡಾನ್ಹ ಬೆಳ್ತಂಗಡಿ, ಅಲ್ಫೋನ್ಸ್ ರೊಡ್ರಿಗಸ್ ಅಳದಂಗಡಿ, ವಿನ್ಸೆಂಟ್ ಪ್ರಕಾಶ್ ಪಿಂಟೊ ಬೆಳ್ತಂಗಡಿ, ತೋಮಸ್ ಆರ್. ನೋರೋನ್ಹಾ ವೇಣೂರು, ಪ್ರಸಾದ್ ಪಿಂಟೊ ಅಳದಂಗಡಿ, ರಪಾಯಲ್ ವೇಗಸ್ ಬದ್ಯಾರ್, ಪೌಲಿನ್ ರೇಗೊ ಪಣೆಜಾಲು ಮತ್ತು ಪ್ಲಾವಿಯ ಡಿಸೋಜ ಬೆಳ್ತಂಗಡಿ ಇವರುಗಳು ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ಮಂಗಳೂರಿನ ವಿಲಾಸ್ ರವರು ಚುನಾವಣೆಯನ್ನು ನಡೆಸಿ ಕೊಟ್ಟರು, ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್, ಹಾಗೂ ಸಿಬ್ಬಂದಿಗಳು ಸಹಕರಿಸಿದರು.
p>