ಮಡಂತ್ಯಾರಿಗೆ ಹೋದ ಮಹಿಳೆ ನಾಪತ್ತೆ

0

ಗರ್ಡಾಡಿ ಗ್ರಾಮದ ಬಂಗಟ ಮನೆ ನಿವಾಸಿ ಜೋನ್ ಮೋನಿಸ್ ರವರ ಪತ್ನಿ ಪ್ರಿಯ ಟಿ.ಎಂ (37 ವರ್ಷ) ರವರು ಡಿ. 22 ರಂದು ಮನೆಯಿಂದ ಮಡಂತ್ಯಾರಿಗೆ ಹೋಗಿ ಮೊಬೈಲ್ ಸಿಮ್ ಕಾರ್ಡ್ ತರುವುದಾಗಿ ಹೇಳಿ ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆ ಯಾಗಿದ್ದರೆ.

ಅವರ ಬಳಿ ಇದ್ದ ಎರಡು ಮೊಬೈಲ್ ನಂಬರ್ ಗಳನ್ನು ಸ್ವಿಚ್ ಆಫ್ ಮಾಡಿದ್ದು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇದ್ದುದರಿಂದ ಅವರ ಪತಿ ಜೋನ್ ಮೋನಿಸ್ ಎಂಬವರು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ ಪ್ರಕರಣ ದಾಖಲಾಗಿರುತ್ತದೆ. ಮನೆಯಿಂದ ಹೊರಟವೇಳೆ ಶ್ರೀಮತಿ ಪ್ರಿಯಾ ರವರು ನೀಲಿ ಬಣ್ಣದಲ್ಲಿ ಬಿಳಿಹೂಗಳಿರುವ ಚೂಡಿದಾರದ ಟಾಪ್ ಮತ್ತು ನೀಲಿ ಬಣ್ಣ ಲೆಗ್ಗಿನ್ ಪ್ಯಾಂಟ್ ಧರಿಸಿದ್ದು, ಇವರು ಸುಮಾರು 5 ಅಡಿ 2 ಇಂಚು ಉದ್ದವಿದ್ದು ಸಾಧಾರಣ ಮೈಕಟ್ಟು ಹೊಂದಿದ್ದು ಬೂದು ಮೈಬಣ್ಣದವರಾಗಿದ್ದು ಕನ್ನಡ, ಮಲೆಯಾಳಿ, ಕೊಂಕಣಿ ಮತ್ತು ತುಳು ಭಾಷೆ ಮಾತನಾಡುತ್ತಾರೆ. ಇವರು ಎಲ್ಲಿಯಾದರೂ ಪತ್ತೆಯಾದಲ್ಲಿ ಕೂಡಲೆ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರ ಮೊಬೈಲ್ ನಂಬ್ರ: 9480805370 ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ: 08256-232093 ನೇದಕ್ಕೆ ತಿಳಿಸುವಂತೆ ಕೋರಲಾಗಿದೆ.

p>

LEAVE A REPLY

Please enter your comment!
Please enter your name here