ವೇಣೂರು: ಶ್ರೀ ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನ ಕರಿಮಣೇಲು ಇದರ ಪುನ ಪ್ರತಿಷ್ಠಾ ಅಷ್ಡಬಂಧ ಬ್ರಹ್ಮಕಲಶಾಭಿಷೇಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ, ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ವಹಿಸಿದ್ದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ,ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೋಕ್ತೇಶರ ಶಿವಪ್ರಸಾದ್ ಅಜಿಲ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಎಸ್.ಕೆ.ಡಿ.ಆರ್.ಡಿ.ಪಿ ದ.ಕ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ,ಬೆಂಗಳೂರು ಉದ್ಯಮಿ ಉಮೇಶ್ ಹೆಗ್ಡೆ ತಿಮ್ಮಣ್ಣಬೆಟ್ಟು,ವೇಣೂರು ವರ್ತಕರ ಸಂಘದ ಅಧ್ಯಕ್ಷ ಕೆ.ಭಾಸ್ಕರ ಪೈ,ತಾ.ಪಂ ಮಾಜಿ ಸದಸ್ಯ ದೇಜಪ್ಪ ಶೆಟ್ಟಿ ಪಿಜತ್ರೋಡಿ ಕರಿಮಣೇಲು,ಯಶೋಧರ ಹೆಗ್ಡೆ ಪಾಳೆಂಜ ಕರಿಮಣೇಲು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಭಟ್ ದಡ್ಡು ಉಪಸ್ಥಿತರಿದ್ದರು.
ಸನ್ಮಾನ: ಕಾರ್ಯಕ್ರಮದಲ್ಲಿ ಯಶೋಧರ ಹೆಗ್ಡೆ ಪಾಳೆಂಜ, ದೇಜಪ್ಪ ಶೆಟ್ಟಿ ಪಿಜತ್ರೋಡಿ,ದೇವಸ್ಥಾನದ ಪ್ರಧಾನ ಆರ್ಚಕ ಚಂದ್ರಶೇಖರ ಅಸ್ರಣ್ಣ ಮತ್ತು ಗಿರಿಜಮ್ಮ ದಂಪತಿ,ಶ್ರೀಧರ ಮೆಸ್ತ್ರಿ ಅವರನ್ನು ಸನ್ಮಾನಿಸಲಾಯಿತು.
ಶ್ರೀಮತಿ ಶೃತಿ ಶ್ರವಣ್ ನಂದನ್ ಪ್ರಾರ್ಥಿಸಿದರು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣ ಕೆ, ನಿಸರ್ಗ ಸ್ವಾಗತಿಸಿದರು.ಶಿಕ್ಷಕ ಮಹಾವೀರ್ ಜೈನ್ ನಿರೂಪಿಸಿದರು.
ಬೆಳಿಗ್ಗೆ ಕುಂಭ ಲಗ್ನ ಸುಮೂಹೂರ್ತದಲ್ಲಿ ಮಹಾದೇವ ದೇವತಾ ಪ್ರತಿಷ್ಠೆ ನಡೆಯಿತು. ಗಣಯಾಗ,ಭೂವರಾಹ ಹೋಮ,ಪ್ರಸನ್ನ ಪೂಜೆ,ಪಲ್ಲಪೂಜೆ, ಬಲಿ ಪೀಠ ಪ್ರತಿಷ್ಠೆ, ದಿಶಾ ಹೋಮ,ಅಘೋರ ಹೋಮ ನಡೆಯಿತು.
ಪ್ರಜ್ಞಾ ಪ್ರಭು ವೇಣೂರು ಮತ್ತು ಬಳಗದವರಿಂದ ಕಥಾಕಾಲಕ್ಷೇಪ ನಡೆಯಿತು.